ಮೂಲ್ಕಿ: ಸಮಸ್ತ ಸಮಾಜದೊಂದಿಗೆ ಜೀವಿಸುವುದೇ ನಿಜವಾದ ಬದುಕು. ಜಾತಿಯ ಗೋಡೆಯನ್ನು ಕೆಡವಿ ಎಲ್ಲರೂ ಸಮಾನರು ಎನ್ನುವ ನಾರಾಯಣಗುರುಗಳ ಸಂದೇಶವನ್ನು ಎಲ್ಲ ಸಮುದಾಯದವರೂ ಪಾಲಿಸಿದರೆ ಸಾಮರಸ್ಯದ ಬದುಕನ್ನು ಸುಂದರವಾಗಿ ಕಟ್ಟಬಹುದು ಎಂದು ಬಂಟ್ಸ್ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷ ಎ.ಸದಾನಂದ ಶೆಟ್ಟಿ ಹೇಳಿದರು.
ಅವರು ಮೂಲ್ಕಿ ಬಳಿಯ ಸಸಿಹಿತ್ಲು ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ ಅಗ್ಗಿದ ಕಳಿಯದ ಸುವರ್ಣಮಹೋತ್ಸವದ ಅಂಗವಾಗಿ ನಡೆದ ಸಾಧಕರ ಸಮ್ಮಿಲನ ಕಾರ್ಯಕ್ರಮದಲ್ಲಿ ಸುವರ್ಣ ಸಿರಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
ಸಂಘದ ಕಾರ್ಯಾಧ್ಯಕ್ಷ ಕೇಶವ ಅಂಚನ್ ಅಧ್ಯಕ್ಷತೆ ವಹಿಸಿದ್ದರು.
ಧಾರ್ಮಿಕ ಚಿಂತಕ ಮಹೇಶ್ ಶಾಂತಿ ಮಾತನಾಡಿದರು.
ಸಾಹಿತಿ ಮುದ್ದು ಮೂಡಬೆಳ್ಳೆ, ಯಕ್ಷಗಾನ ಕಲಾವಿದ ಸೀತಾರಾಂ ಕುಮಾರ್ ಕಟೀಲು, ಕಲಾವಿದರಾದ ಭೋಜರಾಜ್ ವಾಮಂಜೂರು, ಉಮೇಶ್ ಮಿಜಾರ್, ಅರ್ಜುನ್ ಕಾಪಿಕಾಡ್, ಕ್ರೀಡಾಪಟುಗಳಾದ ಸುಕೇಶ್ ಅಮೀನ್ ಕಾರ್ಕಳ, ಜನಾರ್ದನ ಸಿ.ಬಿ. ಅವರನ್ನು ಸನ್ಮಾನಿಸಲಾಯಿತು.
ಮುಂಬೈ ಪೂವಾವೈನ ಸುವರ್ಣ ಬಾಬಾ, ಸಿ.ಎ.ಸುನೀಲ್, ಊರ್ಮಿಳಾ ರಮೇಶ್‌ಕುಮಾರ್, ತೇಜೋಮಯ, ರಾಹುಲ್ ಸುವರ್ಣ, ಮಾಜಿ ಶಾಸಕ ಜೆ.ಡಿ.ನಾಯ್ಕ್, ಧರ್ಮಾವತಿ ಸುರೇಶ್, ಚಂದಯ್ಯ ಕರ್ಕೇರ, ಪ್ರಕಾಶ್‌ಕುಮಾರ್, ಬಿ.ಎನ್.ರಮೇಶ್ ಪೂಜಾರಿ ಚೆಳ್ಯಾರು, ನರೇಶ್‌ಕುಮಾರ್ ಸಸಿಹಿತ್ಲು, ಸರೋಜಿನಿ ಶಾಂತಾರಾಜ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.