ADVERTISEMENT

ವರ್ಕ್‌ ಫ್ರಂ ಹೋಂನಲ್ಲಿದ್ದ ಟೆಕ್ಕಿ ಹೃದಯಾಘಾತದಿಂದ ನಿಧನ

​ಪ್ರಜಾವಾಣಿ ವಾರ್ತೆ
Published 11 ಮೇ 2021, 5:57 IST
Last Updated 11 ಮೇ 2021, 5:57 IST
ಶ್ರೀಕಾಂತ್
ಶ್ರೀಕಾಂತ್   

ಉಳ್ಳಾಲ: ವರ್ಕ್‌ ಫ್ರಂ ಹೋಂನಲ್ಲಿದ್ದ ಬೆಂಗಳೂರಿನ ಐಟಿ ಉದ್ಯೋಗಿ, ಉಳ್ಳಾಲ ನಿವಾಸಿ ಶ್ರೀಕಾಂತ್ ಪ್ರಭು (40) ಹೃದಯಾಘಾತದಿಂದ ಸೋಮವಾರ ಸಂಜೆ ನಿಧನ ಹೊಂದಿದರು.

ಉಳ್ಳಾಲ ಚೀರುಂಭ ಭಗವತಿ ಕ್ಷೇತ್ರ ಬಳಿ ಮನೆಯ ವಾಸುದೇವ ಪ್ರಭು ಮತ್ತು ತಾರಾಮತಿ ದಂಪತಿ 2ನೇ ಪುತ್ರ ಶ್ರೀಕಾಂತ್ ವಿವಾಹಿತರಾಗಿದ್ದು, ಪತ್ನಿ ಹಾಗೂ ಮಗಳು ಇದ್ದಾರೆ.

ಲಾಕ್‌ಡೌನ್ ಬಳಿಕ ಬೆಂಗಳೂರಿನಿಂದ ಊರಿಗೆ ವಾಪಸಾಗಿದ್ದ ಶ್ರೀಕಾಂತ್, ಮನೆಯಲ್ಲಿದ್ದುಕೊಂಡೇ ಕೆಲಸ ನಿರ್ವಹಿಸುತ್ತಿದ್ದರು. ಸೋಮವಾರ ಕೆಲಸದಲ್ಲಿರುವ ಸಂದರ್ಭದಲ್ಲೇ ಹೃದಯಾಘಾತವಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.