ಮುಡಿಪು (ದಕ್ಷಿಣ ಕನ್ನಡ): ಪಾವೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಳಿಯ ದ್ವೀಪದಲ್ಲಿ ಸುಮಾರು 35 ಕುಟುಂಬಗಳು ವಾಸವಾಗಿದ್ದು, ಅಲ್ಲಿನ ಮತದಾರರು ಶುಕ್ರವಾರ ದೋಣಿಯ ಮೂಲಕ ಬಂದು ಮತ ಚಲಾಯಿಸಿದರು.
ಸುತ್ತಲೂ ನೇತ್ರಾವತಿ ನದಿಯ ನೀರು ಆವರಿಸಿದ್ದು, ದ್ವೀಪದಿಂದ ಹೊರ ಹೋಗಲು ಅವರು ದೋಣಿಯನ್ನೇ ಅವಲಂಬಿಸಿದ್ದಾರೆ. ಪಾವೂರು ಗ್ರಾಮದ ಗಾಡಿಗದ್ದೆ ಶಾಲೆಯ ಮತದಾನ ಕೇಂದ್ರಕ್ಕೆ ಬಂದ ಅವರು ತಮ್ಮ ಹಕ್ಕು ಚಲಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.