ಮಂಗಳೂರು: ಮಹಾತ್ಮ ಗಾಂಧಿ ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ, ಅವರ ಬೌದ್ಧಿಕತೆ ಸದಾ ಮಾರ್ಗದರ್ಶಕವಾಗಿದೆ ಎಂದು ಸಾಹಿತಿ ಪ್ರಭಾಕರ ಶಿಶಿಲ ಹೇಳಿದರು.
ನಗರದ ಮಹಾತ್ಮ ಗಾಂಧಿ ಶಾಂತಿ ಪ್ರತಿಷ್ಠಾನದ ಆಶ್ರಯದಲ್ಲಿ ಗಾಂಧಿ ಪುಣ್ಯ ತಿಥಿ ಅಂಗವಾಗಿ ಗುರುವಾರ ನಡೆದ ಸಮನ್ವಯ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಗಾಂಧಿ ಮೌಲ್ಯಗಳಿಗೆ ಎಂದೂ ಸಾವಿಲ್ಲ. ಯುವಜನರು ಗಾಂಧಿ ಮೌಲ್ಯಗಳನ್ನು ಅನುಸರಿದರೆ ಸಮನ್ವಯ ಭಾರತದ ಕನಸು ನನಸಾಗುತ್ತದೆ ಎಂದರು.
ವಿಧಾನಸಭೆ ಅಧ್ಯಕ್ಷ ಯು.ಟಿ.ಖಾದರ್, ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಸೇಂಟ್ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಕುಲಪತಿ ಪ್ರವೀಣ್ ಮಾರ್ಟಿಸ್ ಅವರು ಗಾಂಧಿ ಸಂದೇಶದ ಕುರಿತು ಮಾತನಾಡಿದರು.
ಯು.ಟಿ.ಖಾದರ್ ಹಾಗೂ ಪ್ರವೀಣ್ ಮಾರ್ಟಿಸ್ ಅವರನ್ನು ಸನ್ಮಾನಿಸಲಾಯಿತು. ಪ್ರತಿಷ್ಠಾನದ ಅಧ್ಯಕ್ಷ ಸದಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪ್ರಭಾಕರ ಶ್ರೀಯಾನ್, ಇಬ್ರಾಹಿಂ ಕೋಡಿಜಾಲ್ ಇದ್ದರು.
ಕಾಸಿಯಾ ಪ್ರೌಢಶಾಲೆ ವಿದ್ಯಾರ್ಥಿಗಳು ಗಾಂಧಿ ಭಜನೆ, ಬಲ್ಮಠ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ದೇಶಭಕ್ತಿ ಗೀತೆ ಹಾಡಿದರು. ಇಸ್ಮಾಯಿಲ್ ಸ್ವಾಗತಿಸಿದರು. ಪ್ರೇಮಚಂದ್ ವಂದಿಸಿದರು. ನಾಗೇಶ್ ಕಲ್ಲೂರು ಕಾರ್ಯಕ್ರಮ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.