ADVERTISEMENT

ಕಾಸರಗೋಡು: ವಿಚ್ಛೇಧಿತ ಮಹಿಳೆಯರ ವಂಚಿಸುತ್ತಿದ್ದಾತನ ಬಂಧನ

​ಪ್ರಜಾವಾಣಿ ವಾರ್ತೆ
Published 5 ಜೂನ್ 2025, 13:14 IST
Last Updated 5 ಜೂನ್ 2025, 13:14 IST
<div class="paragraphs"><p>ಬಂಧನ (ಸಾಂದರ್ಭಿಕ ಚಿತ್ರ)</p></div>

ಬಂಧನ (ಸಾಂದರ್ಭಿಕ ಚಿತ್ರ)

   

ಕಾಸರಗೋಡು: ಮದುವೆಯಾಗುವುದಾಗಿ ಮಾತುಕೊಟ್ಟು ಮಹಿಳೆಯರ ಮೇಲೆ ಲೈಂಗಿಕ ಅಪರಾಧ ಎಸಗಿ ವಂಚಿಸಿದ ಆರೋಪಿ, ತ್ರಿಶೂರ್ ಕೈದಮಂಗಲಂ ಕುರಿಕ್ಕುಳಿ ನಿವಾಸಿ ಪಿ.ಎಸ್ ಪ್ರಷೋಬ್ ಎಂಬಾತನನ್ನು ನಗರ ಪೊಲೀಸರು ತ್ರಿಶೂರ್‌ನಲ್ಲಿ ಬಂಧಿಸಿದ್ದಾರೆ. ವಿಚ್ಛೇಧಿತ ಮಹಿಳೆಯರ ಸಖ್ಯ ಬೆಳೆಸುತ್ತಿದ್ದ ಆತ ನಂತರ ಮದುವೆಯಾಗುವುದಾಗಿ ನಂಬಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಜಿಲ್ಲೆಯ ಸಂತ್ರಸ್ತ ಮಹಿಳೆಯರು ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಮನೆಗೆ ಕನ್ನ : ಆರೋಪಿ ಬಂಧನ

ADVERTISEMENT

ಕಾಸರಗೋಡು: ಕೊಳತ್ತೂರಿನ ಮನೆಯೊಂದರಿಂದ ನಗ-ನಗದು ಕಳವು ಮಾಡಿದ ಆರೋಪದಲ್ಲಿ ಸ್ಥಳೀಯ ಮಣಿಯರಂಕೊಚ್ಚಿ ನಿವಾಸಿ ಭಾಸ್ಕರನ್ (45) ಎಂಬಾತನನ್ನು ಬೇಡಗಂ ಪೊಲೀಸರು ಬಂಧಿಸಿದ್ದಾರೆ. ಇಲ್ಲಿನ ಸರೋಜಿನಿ ಅವರ ಮನೆಯಲ್ಲಿ ಈತ ಕಳವು ನಡೆಸಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಬಾವಿಯಲ್ಲಿ ಶವ ಪತ್ತೆ

ಕಾಸರಗೋಡು : ಮಂಜೇಶ್ವರ ಬಳಿಯ ಕೆದಂಬಾಡಿ ಪಾವಲಗುರಿ ಎಂಬಲ್ಲಿನ ಬಾವಿಯಲ್ಲಿ ಸ್ಥಳೀಯ ನಿವಾಸಿ ಅಫ್ತಾಬ್ ಎಂಬವರ ಪತ್ನಿ ಅಫ್ಸಾಬಿ (52) ಅವರ ಶವ ಗುರುವಾರ ಪತ್ತೆಯಾಗಿದೆ. ಉಪ್ಪಳದ ಅಗ್ನಿಶಾಮಕದಳ ಶವವನ್ನು ಮೇಲಕ್ಕೆತ್ತಿದೆ.

ಆತ್ಮಹತ್ಯೆಗೆ ಯತ್ನಿಸಿದಾಕೆ ಸಾವು

ಕಾಸರಗೋಡು: ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿ ಗಂಭೀರ ಸ್ಥಿತಿಯಲ್ಲಿ ವಯನಾಡಿನ ವೈದ್ಯಕೀಯ ಆಸ್ಪತ್ರೆ ಕಾಲೇಜಿಗೆ ದಾಖಲಾಗಿದ್ದ ಉದುಮಾ ಬಳಿಯ ಅರಮಂಗಾನಂ ಉಲೂಜಿ ನಿವಾಸಿ ರಂಜಿನಿ (17) ಮೃತಪಟ್ಟಿದ್ದಾರೆ. ಸುಮಲತಾ ಅವರ ಪುತ್ರಿ ರಂಜಿನಿ ಏ.28ರಂದು ಮನೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದರು.

ನೇಣಿಗೆ ಶರಣು

ಕಾಸರಗೋಡು: ಬೇಡಗಂ ಬಳಿಯ ವಲಿಯಡ್ಕ ನಿವಾಸಿ ವಿನೀಷ್ ಬಾಬು (45) ಮನೆ ಬಳಿಯ ಶೆಡ್ಡಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಬೇಡಡ್ಕ ಕಾಂಞಿರತ್ತಿಕ್ಕಾಲ್ ಎಂಬಲ್ಲಿ ವ್ಯಾಪಾರ ನಡೆಸುತ್ತಿದ್ದರು. ಹೊಸದುರ್ಗ ತೆರುವತ್ ಲಕ್ಷ್ಮಿನಗರ ನಿವಾಸಿ ಕೆ.ವಿ ಆದರ್ಶ್ (24) ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಕೆ.ಆಶೋಕನ್-ರಾಧಾ ದಂಪತಿ ಪುತ್ರ.

ಅಸಭ್ಯ ವರ್ತನೆ: ಬಂಧನ

ಕಾಸರಗೋಡು: ನಗರದ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಬಸ್ಸೊಂದರಲ್ಲಿ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪದಲ್ಲಿ ಆಲಪ್ಪುಳ ನಿವಾಸಿ ನಾಸರ್ (53) ಎಂಬಾತನನ್ನು ನಗರ ಪೊಲೀಸರು ಬಂಧಿಸಿದ್ದಾರೆ. ಈತನನ್ನು ಸಹಪ್ರಯಾಣಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು.

ಮಗುಚಿದ ಲಾರಿ: ಚಾಲಕ ಬಂಧನ

ಕಾಸರಗೋಡು: ಪಾಲಕುನ್ನಿನಲ್ಲಿ ಗುರುವಾರ ರಸ್ತೆ ವಿಭಾಜಕಕ್ಕೆ ಡಿಕ್ಕಿಯಾಗಿ ಲಾರಿ ಮಗುಚಿದೆ. ಲಾರಿಯಲ್ಲಿದ್ದ ಚಾಲಕ ಮತ್ತು ಕ್ಲೀನರ್ ಪಾರಾಗಿದ್ದಾರೆ. ಅಜಾಗರೂಕತೆಯಿಂದ ಲಾರಿ ಚಲಾಯಿಸಿದ ಆರೋಪದಲ್ಲಿ ಚಾಲಕ ಕೆ.ಇಂತಿಯಾಝ್ ಎಂಬಾತನನ್ನು ಬೇಕಲ ಪೊಲೀಸರು ಬಂಧಿಸಿದ್ದಾರೆ.

ನಾಲ್ವಡಿ ಕೃಷ್ಣರಾಜ ಒಡೆಯರ್ ಜನ್ಮ ದಿನಾಚರಣೆ

ಕಾಸರಗೋಡು: ನಾಲ್ವಡಿ ಕೃಷ್ಣರಾಜ ಒಡೆಯರ್ ಜನ್ಮದಿನಾಚರಣೆ ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕ ವತಿಯಿಂದ ಸೀತಾಂಗೋಳಿಯಲ್ಲಿ ನಡೆಯಿತು. ವಕೀಲ ಥಾಮಸ್ ಡಿಸೋಜ ಸಂಸ್ಮರಣೆ ಭಾಷಣ ಮಾಡಿದರು. ಘಟಕದ ಅಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾವಾಣಿ ಮಠದಮೂಲೆ, ಸುಕುಮಾರ ಕುದ್ರೆಪ್ಪಾಡಿ, ರಾಮಚಂದ್ರ ಭಟ್ ಧರ್ಮತ್ತಡ್ಕ, ಪ್ರೇಮಶರಧಿ ಭಾಗವಹಿಸಿದ್ದರು. ಶೇಖರ ಶೆಟ್ಟಿ ಬಾಯಾರು ಸ್ವಾಗತಿಸಿದರು. ವಿಶಾಲಾಕ್ಷ ಪುತ್ರಕಳ ನಿರೂಪಿಸಿದರು. ಪ್ರದೀಪ್ ಕುಮಾರ್ ಶೆಟ್ಟಿ ಬೇಳ ವಂದಿಸಿದರು.

ಕಾನಮಠದಲ್ಲಿ ಗುರುಭವನಕ್ಕೆ ಶಂಕು ಸ್ಥಾಪನೆ

ಕಾಸರಗೋಡು: ಕುಂಬಳೆ ಬಳಿಯ ಕಾನ ಶಂಕರನಾರಾಯಣ ಮಠದಲ್ಲಿ ನಿರ್ಮಿಸುವ ಗುರುಭವನಕ್ಕೆ ಶಂಕುಸ್ಥಾಪನೆ ನಡೆಯಿತು. ಸಮಿತಿಗಳ ಪದಾಧಿಕಾರಿಗಳಾದ ಕೇಶವ ಪ್ರಸಾದ್ ನಾಣಿತ್ತಿಲು, ಬಲರಾಮ ಭಟ್ ಕಾಕುಂಜೆ, ಮಹೇಶ್ ಭಟ್ ಕೆ, ರವಿಶಂಕರ ಭಟ್ ಉಪ್ಪಂಗಳ, ಯು.ಎಸ್ ಗಣೇಶ್ ಭಟ್ ಶಿರಂಕಲ್ಲು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.