
ಮಂಗಳೂರು: ಸುರತ್ಕಲ್ ಬಾರ್‌ನಲ್ಲಿ ಜಗಳವಾಡಿ ಹೊರಬಂದ ನಂತರ ಇಬ್ಬರಿಗೆ ಚೂರಿಯಿಂದ ಇರಿಯಲಾಗಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸ ಲಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಸಿ.ಎಚ್ ತಿಳಿಸಿದ್ದಾರೆ.
ಸುರತ್ಕಲ್‌ನ ಕಾನಾದ ಕಟ್ಲಮನೆಯ ಸುಶಾಂತ್ ಯಾನೆ ಕಡವಿ (29), ಸುರತ್ಕಲ್ ಇಡ್ಯಾ ಗ್ರಾಮದ ಕಾನಾ ಕಟ್ಲದ ಬೈಕಲ್ ಮನೆಯ ಕೆ.ವಿ. ಅಲೆಕ್ಸ್ (27), ಸುರತ್ಕಲ್ ಇಂದಿರಾ ಕಟ್ಟೆಯ ಶಿವಕೃಪಾ ನಿವಾಸಿ ನಿತಿನ್ (26) ಮತ್ತು ಆರೋಪಿ ಗಳಿಗೆ ಆಶ್ರಯ ಕೊಟ್ಟಿದ್ದ ಹೊನ್ನಕಟ್ಟೆಯ ಅರುಣ್ ಶೆಟ್ಟಿ (56) ಬಂಧಿತರು.
ಪ್ರಕರಣದ ಪ್ರಮುಖ ಆರೋಪಿ ರೌಡಿಶೀಟರ್ ಮತ್ತು ಬಜರಂಗದಳ ಕಾರ್ಯಕರ್ತ ಗುರುರಾಜ್, ಅರುಣ್ ಶೆಟ್ಟಿ ಜೊತೆಗೂಡಿ ಆರೋಪಿಗಳಿಗೆ ಆಶ್ರಯ ನೀಡಿದ ಅಶೋಕ್ ತಲೆಮರೆಸಿಕೊಂಡಿ ದ್ದಾರೆ ಎಂದು ಕಮಿಷನರ್ ತಿಳಿಸಿದ್ದಾರೆ.
ಗುರುವಾರ ರಾತ್ರಿ 10.30ರ ವೇಳೆ ಸುರತ್ಕಲ್ ಕಾನಾ ಸಮೀಪದ ದೀಪಕ್ ಬಾರ್ ಸಮೀಪದಲ್ಲಿ ಹಸನ್ ಮುಕ್ಷಿತ್ ಮತ್ತು ನಿಜಾಮ್ ಎಂಬಿಬ್ಬರು ಯುವಕರೊಂದಿಗೆ ಆರೋಪಿಗಳಿಗೆ ಜಗಳವಾಗಿತ್ತು. ನಂತರ ಮುಕ್ಷಿತ್ ಮತ್ತು ನಿಜಾಮ್ ಅವರಿಗೆ ಚೂರಿಯಿಂದ ಇರಿಯಲಾಗಿತ್ತು. ನಿಜಾಮ್ ಹೊಟ್ಟೆ ಭಾಗದಲ್ಲಿ ಗಂಭೀರ ಗಾಯವಾಗಿದ್ದು ಮುಕ್ಷಿತ್ ಕೈಗೆ ಸಣ್ಣಪುಟ್ಟ ಗಾಯಗಳಾಗಿವೆ. ಅವರಿಬ್ಬರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಸುರತ್ಕಲ್ ಠಾಣೆಯ ಇನ್‌ಸ್ಪೆಕ್ಟರ್ ಪ್ರಮೋದ್ ಕುಮಾರ್ ಪಿ. ನೇತೃತ್ವ ದಲ್ಲಿ ಸಿಸಿಬಿ ಘಟಕ, ಎಸ್‌ಎಎಫ್, ಶ್ವಾನದಳದ ತಂಡವನ್ನು ರಚಿಸಲಾಗಿತ್ತು. ಆರೋಪಿಗಳಿಗಾಗಿ ಕಾರ್ಯಾಚರಣೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.