ADVERTISEMENT

ತ್ರಿದೇವಿ ಪ್ರೇಮ್ ಡ್ರೆಜ್ಜಿಂಗ್ ಹಡಗಿನ 13 ಸಿಬ್ಬಂದಿ‌ ರಕ್ಷಣೆ

ಭಾರತೀಯ ಕರಾವಳಿ ಪಡೆಯ ಸಾಹಸ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2019, 10:39 IST
Last Updated 3 ಸೆಪ್ಟೆಂಬರ್ 2019, 10:39 IST
ಸಿಬ್ಬಂದಿಯ ರಕ್ಷಣಾ ಕಾರ್ಯಾಚರಣೆ
ಸಿಬ್ಬಂದಿಯ ರಕ್ಷಣಾ ಕಾರ್ಯಾಚರಣೆ   

ಮಂಗಳೂರು: ನವ ಮಂಗಳೂರು ಬಂದರು ಸಮೀಪದ ಸಮುದ್ರದಲ್ಲಿ ಸಿಲುಕಿಕೊಂಡಿದ್ದ ತ್ರಿದೇವಿ ಪ್ರೇಮ್ ಡ್ರೆಡ್ಜ್‌ನಲ್ಲಿದ್ದ 13 ಸಿಬ್ಬಂದಿಯನ್ನು ರಕ್ಷಿಸುವಲ್ಲಿ ಭಾರತೀಯ ಕರಾವಳಿ ಕಾವಲು ಪಡೆ ಯಶಸ್ವಿಯಾಗಿದೆ.

ಮುಂಬೈ ಮೂಲದ ಮೆರ್ಕೇಟರ್ ಲಿಮಿಟೆಡ್ ಎಂಬ ಕಂಪನಿಗೆ ಸೇರಿದ್ದ ಡ್ರೆಡ್ಜ್, ನವ ಮಂಗಳೂರು ಬಂದರಿನ ಆಳ ಪರೀಕ್ಷೆಯ ಸಲುವಾಗಿ ಕಳೆದ ಕೆಲ ದಿನಗಳಿಂದ ಸಮುದ್ರದಲ್ಲಿ ಲಂಗರು ಹಾಕಿದ್ದು, ಡ್ರೆಡ್ಜ್‌ನ ಪಂಪ್ ರೂಮಿನ ಬಿರುಕಿನಿಂದ ಸಮುದ್ರದ ನೀರು ಒಳನುಗಿದ್ದು, ಇದರಿಂದ ಡ್ರೆಡ್ಜ್ ಮುಳುಗಡೆಯಾಗುವ ಸ್ಥಿತಿ ನಿರ್ಮಾಣವಾಗಿತ್ತು.ಈ ಮಾಹಿತಿಯನ್ನು ಪಡೆದ ಕರಾವಳಿ ಪಡೆ ರಕ್ಷಣಾ ಕಾರ್ಯಾಚರಣೆಗೆ ಮುಂದಾಗಿ ಸಿಬ್ಬಂದಿಗಳನ್ನು ಸುರಕ್ಷಿತವಾಗಿ ರಕ್ಷಿಸಲಾಯಿತು.

ಭಾನುವಾರ ಡ್ರೆಜ್ಜಿಂಗ್‌ನ ಪಂಪ್ ರೂಮಿಗೆ ನೀರು ನುಗ್ಗಿತ್ತು. ಆದರೆ ಅದನ್ನು ತ್ವರಿತವಾಗಿ ಸರಿಪಡಿಸಲಾಗಿತ್ತು, ಆದರೆ ಸೋಮವಾರ ಬೆಳಿಗ್ಗೆ ಮತ್ತೆ ನೀರು ನುಗ್ಗಿದ ಕಾರಣ ಡ್ರೆಡ್ಜ್ ಮುಳುಗುವ ಹಂತ ತಲುಪಿತ್ತು, ಇದರಿಂದ ಸಿಬ್ಬಂದಿಯನ್ನು ರಕ್ಷಿಸಲಾಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.