ADVERTISEMENT

ಜೋಕಟ್ಟೆ: ಕಳವು ಆರೋಪಿಗಳಿಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2026, 8:10 IST
Last Updated 8 ಫೆಬ್ರುವರಿ 2026, 8:10 IST
ಅಬ್ದುಲ್ ನಾಸರ್‌
ಅಬ್ದುಲ್ ನಾಸರ್‌   

ಮಂಗಳೂರು: ಕೆಂಜಾರು ಜೋಕಟ್ಟೆಯಲ್ಲಿ ಕೆಲ ತಿಂಗಳ ಹಿಂದೆ ನಡೆದಿದ್ದ ಕಳವು ಪ್ರಕರಣದ ಆರೋಪಿಗಳಿಬ್ಬರನ್ನು ಬಜಪೆ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಸಂಬಂಧಿಕರ ಮೆಹಂದಿ ಕಾರ್ಯಕ್ರಮಕ್ಕೆ 2025ರ ಸೆ 23ರಂದು ಕಳವಾರಿಗೆ ಹೋಗಿದ್ದಾಗ ಮನೆಯಲ್ಲಿದ್ದ ಸುಮಾರು ₹ 23 ಲಕ್ಷ  ಮೌಲ್ಯದ ಚಿನ್ನಾಭರಣ ಮತ್ತು ₹ 1.25 ಲಕ್ಷ ನಗದು ಹಣ ಕಳವಾದ ಬಗ್ಗೆ ಕೆಂಜಾರು ಜೋಕಟ್ಟೆಯಲ್ಲಿ ಮೊಹಮ್ಮದ್ ಷರೀಫ್ ಬಜಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿತ್ತು.

ಬಾಳ ಗ್ರಾಮದ ಕಳವಾರಿನ ಅಬ್ದುಲ್ ನಾಸರ್ ಅಲಿಯಾಸ್‌ ನಾಸಿರ್ ಅಲಿಯಾಸ್‌ ನಾಚಿ (31) ಈ ಕಳವು ಕೃತ್ಯದಲ್ಲಿ ಭಾಗಿಯಾಗಿ ನಂತರ ವಿದೇಶದಲ್ಲಿ ತಲೆಮರೆಸಿಕೊಂಡಿದ್ದು ತನಿಖೆ ವೇಳೆ ಗೊತ್ತಾಗಿತ್ತು. ಆತನ ಬಂಧನಕ್ಕೆ ಪೊಲೀಸರು ಲುಕ್ ಔಟ್‌ ಸುತ್ತೋಲೆಯನ್ನು ಹೊರಡಿಸಿದ್ದರು.

ADVERTISEMENT

‘ಆರೋಪಿ ಅಬ್ದುಲ್ ನಾಸೀರ್  ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ.  ಪ್ರಕರಣದ ದೂರುದಾರರಾದ ಮೊಹಮ್ಮದ್ ಷರೀಫ್  ಅವರ ಸಂಬಂಧಿ ಕಳವಾರು ನಿವಾಸಿ ಮಯ್ಯದ್ದಿ ಇಮ್ರಾನ್ ಮತ್ತು ನಾನು ಸೇರಿ ಈ ಕಳ್ಳತನ ಮಾಡಿದ್ದೆವು’ ಎಂದು ಆತ  ಒಪ್ಪಿಕೊಂಡಿದ್ದ. ಆರೋಪಿಗಳಿಂದ ₹ 27 ಲಕ್ಷ  ಮೌಲ್ಯದ 222 ಗ್ರಾಂ ತೂಕದ ಚಿನ್ನಾಭರಣಗಳನ್ನು, ₹ 20 ಸಾವಿರ ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ ಅಂದಾಜು ₹ 50 ಸಾವಿರ  ಮೌಲ್ಯದ ಸ್ಕೂಟರ್ ಅನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಆರೋಪಿಗಳಿಗೆ  ನ್ಯಾಯಾಂಗ ಬಂಧನ ವಿಧಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ. 

ಮಯ್ಯದಿ ಇಮ್ರಾನ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.