ADVERTISEMENT

ಮಂಗಳೂರು: ಲಕ್ಕಿ ಸ್ಕೀಂ ಹೆಸರಲ್ಲಿ ₹10 ಕೋಟಿ ವಂಚನೆ– ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2025, 21:21 IST
Last Updated 22 ಆಗಸ್ಟ್ 2025, 21:21 IST
<div class="paragraphs"><p>ಬಂಧನ</p></div>

ಬಂಧನ

   

(ಪ್ರಾತಿನಿಧಿಕ ಚಿತ್ರ)

ಮಂಗಳೂರು: ಆಕರ್ಷಕ ಬಹುಮಾನಗಳ ಭರವಸೆ ನೀಡಿ ಲಕ್ಕಿ ಸ್ಕೀಂನಲ್ಲಿ ಹಣ ತೊಡಗಿಸಲು ಪ್ರೇರೇಪಿಸಿ ಒಟ್ಟು ₹ 10 ಕೋಟಿಗೂ ಹೆಚ್ಚು ವಂಚಿಸಿದ ಆರೋಪಿಗಳಿಬ್ಬರನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ.

ADVERTISEMENT

ಬಜಪೆ ನಿವಾಸಿ, ಹಾಲಿ ಕದ್ರಿ ಕಂಬಳ ರಸ್ತೆಯ ಮೌರಿಷ್ಕ ಪ್ಯಾಲೇಸ್‌ನಲ್ಲಿ ವಾಸವಾಗಿರುವ ಮೊಹಮ್ಮದ್ ಅಶ್ರಫ್ ಬಜಪೆ (43) ಹಾಗೂ ಸುರತ್ಕಲ್ ಕಾಟಿಪಳ್ಳ ಸಮೀಪದ ಕೃಷ್ಣಾಪುರದ ಬಾಡಿಗೆ ಮನೆಯಲ್ಲಿರುವ ಮೊಹಮ್ಮದ್ ಹನೀಫ್ (50) ಬಂಧಿತರು ಎಂದು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ. 

ಭಾರತೀಯ ನ್ಯಾಯಸಂಹಿತೆಯ ಕಲಂ 316(2), 318(4) ಮತ್ತು ಅನಿಯಂತ್ರಿತ ಠೇವಣಿ ನಿಷೇಧ ಕಾಯ್ದೆಯ ಕಲಂ 21ರನ್ವಯ ಪ್ರಕರಣ ದಾಖಲಿಸಲಾಗಿದೆ. ಸ್ಕೀಂನಲ್ಲಿ ಹಣ ತೊಡಗಿಸಿದವರು ಅಥವಾ ಅವರಿಂದ ಹಣ ಸಂಗ್ರಹಿಸಿದ ಏಜೆಂಟ್‌ರು ದಾಖಲೆ ಸಮೇತ ಠಾಣೆಗೆ ಹೇಳಿಕೆ ನೀಡಬೇಕು ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.