
ಮೂಡುಬಿದಿರೆ: ಮಂಗಳೂರು ವಿವಿಯ 2022-23ನೇ ಸಾಲಿನ ಫಲಿತಾಂಶ ಪ್ರಕಟಗೊಂಡಿದ್ದು, ಆಳ್ವಾಸ್ ಕಾಲೇಜು ಪಾರಮ್ಯ ಮೆರೆದಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಅಳ್ವ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪದವಿ, ಸ್ನಾತಕೋತ್ತರ, ಶಿಕ್ಷಣ (ಬಿಇಡಿ) ಹಾಗೂ ದೈಹಿಕ ಶಿಕ್ಷಣ ವಿಭಾಗಗಳಲ್ಲಿ ಕಾಲೇಜಿಗೆ 24 ರ್‍ಯಾಂಕ್‌ಗಳು ಲಭಿಸಿವೆ.
ಬಿಎಸ್ಸಿ ಫುಡ್ ನ್ಯೂಟ್ರಿಷನ್ ಆ್ಯಂಡ್ ಡಯಟಿಕ್ಸ್ ವಿಭಾಗದಲ್ಲಿ ದ್ಯುತಿ ರಾವ್ (1ನೇ ರ್‍ಯಾಂಕ್), ರಚನಾ (3ನೇ ರ್‍ಯಾಂಕ್), ಅರ್ಪಿತಾ (7), ಬಿಎಸ್‌ಸಿ ವಿಭಾಗದಲ್ಲಿ ನಿರೀಕ್ಷಾ (4), ಬಿಎಸ್‌ಸಿ ಫ್ಯಾಷನ್ ಡಿಸೈನಿಂಗ್‌ನಲ್ಲಿ ರಮ್ಯಾ (2), ಬಿಕಾಂನಲ್ಲಿ ಗ್ರೀಷ್ಮಾ (1), ಬಿ.ಎ.ಎಚ್‌ಆರ್‌ಡಿ ವಿಭಾಗದಲ್ಲಿ ಸ್ವಾತಿ ನಾಯಕ್ 2ನೇ ರ್‍ಯಾಂಕ್ ಪಡೆದಿದ್ದಾರೆ.
ಬಿಬಿಎ ವಿಭಾಗದಲ್ಲಿ ಸಂಪಾದಾಸ್ (6ನೇ ರ್‍ಯಾಂಕ್), ಸೌಮ್ಯಾ (2), ಭೂಮಿಕಾ ಬಿ.ಎಚ್.(8), ಬಿಎಸ್‌ಡಬ್ಲ್ಯು ವಿಭಾಗದಲ್ಲಿ ಐಶ್ವರ್ಯ (3), ಬಿಸಿಎ ವಿಭಾಗದಲ್ಲಿ ಪೃಥ್ವಿ (5), ಬಿಎ ವಿಭಾಗದಲ್ಲಿ ಶ್ರೀಲಕ್ಷ್ಮಿ 8ನೇ ರ್‍ಯಾಂಕ್ ಗಳಿಸಿದ್ದಾರೆ.
ಇಂಗ್ಲಿಷ್ ಸ್ನಾತಕೋತ್ತರ ವಿಭಾಗದದಲ್ಲಿ ಅಫ್ರಾ ಮೊಹ್ಮದ್ ಇರ್ಫಾನ್ (1ನೇ ರ್‍ಯಾಂಕ್), ಎಂಎಸ್‌ಸಿ ಮನಃಶಾಸ್ತ್ರ ವಿಭಾಗದಲ್ಲಿ ಅನುಶ್ರೀ (1), ಎಂಎಸ್‌ಸಿ ಆನ್ವಯಿಕ ರಾಸಾಯನಿಕ ವಿಜ್ಞಾನದಲ್ಲಿ (1), ಎಂಎಸ್‌ಸಿ ಆಹಾರ ವಿಜ್ಞಾನ ವಿಭಾಗದಲ್ಲಿ ಯಶಸ್ವಿ 1ನೇ ರ್‍ಯಾಂಕ್ ಪಡೆದಿದ್ದಾರೆ.
ಎಂಪಿಇಡ್ ವಿಭಾಗದಲ್ಲಿ ಶಾಲಿನಿ ಕೆ.(1), ಬಿಪಿಇಡಿ ವಿಭಾಗದಲ್ಲಿ ದಿವ್ಯಾ (1), ಮನೀಷಾ (2), ತನುಜಾ (3), ಬಿಇಡಿಯಲ್ಲಿ ರಿಯೋನಾ (2), ಸೊನಿಯಾ (3), ಭವ್ಯಶ್ರೀ 6ನೇ ರ್‍ಯಾಂಕ್ ಪಡೆದಿದ್ದಾರೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.