ADVERTISEMENT

ಮಂಗಳೂರು ಮಹಾನಗರ ಪಾಲಿಕೆ ಇನ್ನು ಕಾಗದರಹಿತ ಕಚೇರಿ: ಅಕ್ಷಯ್

ಪಾರದರ್ಶಕತೆ ಹೆಚ್ಚಿಸಲು ಕ್ರಮ: ಅಕ್ಷಯ್ ಶ್ರೀಧರ್

​ಪ್ರಜಾವಾಣಿ ವಾರ್ತೆ
Published 9 ಮೇ 2021, 6:30 IST
Last Updated 9 ಮೇ 2021, 6:30 IST
ಅಕ್ಷಯ್‌
ಅಕ್ಷಯ್‌   

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯು ಕಾಗದರಹಿತ ಕಚೇರಿಯಾಗಿ ರೂಪುಗೊಂಡಿದೆ. ಮೇ 5ರಿಂದ ಕಾರ್ಯಕ್ರಮ ಅನುಷ್ಠಾನಗೊಂಡಿದೆ.

‘ಪಾಲಿಕೆಯ ಎಲ್ಲ ವಿಭಾಗಗಳ ದಸ್ತಾವೇಜು ಡಿಜಿಟಲೀಕರಣ ಅಥವಾ ಗಣಕೀಕರಣ ಮಾಡಬೇಕು. ಎಲ್ಲ ವಿಭಾಗಗಳ ಮುಖ್ಯಸ್ಥರು ಆಯಾ ವಿಭಾಗದಲ್ಲಿ ಕಾಗದರಹಿತ ಕಾರ್ಯಕ್ರಮ ಅನುಷ್ಠಾನದ ಜವಾಬ್ದಾರಿ ಹೊಂದಿರಬೇಕು. ಕಾಗದರಹಿತ ಅರ್ಜಿ ವ್ಯವಸ್ಥೆ ಅನುಸರಿಸದ ದಾಖಲೆಗಳು, ಕಡತಗಳನ್ನು ತಿರಸ್ಕರಿಸಲಾಗುತ್ತದೆ. ಯಾವುದೇ ವಿಭಾಗ ಅಥವಾ ಅಧಿಕಾರಿ ತಾತ್ಕಾಲಿಕವಾಗಿ ಕಾಗದದ ಅರ್ಜಿ ಸಲ್ಲಿಸುವು ದಾದರೆ, ಆಯುಕ್ತರಿಂದ ಪೂರ್ವಾ ನುಮತಿ ಪಡೆಯಬೇಕು. ಈ ಕಾರ್ಯಕ್ರಮ ಅನುಷ್ಠಾನವು ಪಾಲಿಕೆಯಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಹೆಚ್ಚಿಸುತ್ತದೆ’ ಎಂದು ಆಯುಕ್ತ ಅಕ್ಷಯ್ ಶ್ರೀಧರ್ ತಿಳಿಸಿದ್ದಾರೆ.

ಮೇ 5 ರಿಂದ ಡಿಜಟಲೀಕರಣ ಹಾಗೂ ಗಣಕೀಕರಣ ಮಾಡುವಂತೆ ಅಕ್ಷಯ್ ಶ್ರೀಧರ್ ಆದೇಶಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.