ADVERTISEMENT

ಮಂಗಳೂರು: ₹ 33.75 ಲಕ್ಷ ಮೌಲ್ಯದ‌ ಚಿನ್ನ ವಶಕ್ಕೆ ಕಸ್ಟಮ್ಸ್‌ ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2021, 6:05 IST
Last Updated 13 ಮಾರ್ಚ್ 2021, 6:05 IST
   

ಮಂಗಳೂರು: ಅಕ್ರಮವಾಗಿ ಚಿನ್ನ ಸಾಗಣೆ ಮಾಡುತ್ತಿದ್ದ ವ್ಯಕ್ತಿಯನ್ನು ಮಂಗಳೂರು ಕಸ್ಟಮ್ಸ್‌ ಅಧಿಕಾರಿಗಳು ಶನಿವಾರ ಬಂಧಿಸಿದ್ದಾರೆ.

ಬಂಧಿತನನ್ನುಕೇರಳದ ಕೊಪ್ಪಾ ಮೂಲದ ಮಮ್ಮಿನಿ ಖಾಲಿದ್‌ (45) ಎಂದು ಗುರುತಿಸಲಾಗಿದೆ.

ಖಾಲೀದ್‌ನಿಂದ ₹33,75,470 ಮೌಲ್ಯದ 737 ಗ್ರಾಂ. ತೂಕದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.

ADVERTISEMENT

ದುಬೈನಿಂದ ಆಗಮಿಸಿದ ಏರ್‌ ಇಂಡಿಯಾ ವಿಮಾನದಲ್ಲಿ ಇಲ್ಲಿನ‌ ವಿಮಾನ ನಿಲ್ದಾಣಕ್ಕೆ ಬಂದಿಳಿದ ಖಾಲಿದ್, ವಿಶೇಷವಾಗಿ ತಯಾರಿಸಿದ ಒಳ ಉಡುಪಿನಲ್ಲಿ ಚಿನ್ನ ಕಳ್ಳಸಾಗಣೆ ಮಾಡಲು ಯತ್ನಿಸಿದ್ದ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.

ಕಸ್ಟಮ್ಸ್ ಉಪ ಆಯುಕ್ತ‌‌‌‌ ಅವಿನಾಶ್‌ ಕಿರಣ ರಂಗೋಲಿ ನೇತೃತ್ವದಲ್ಲಿ ಭೂಮ್ಕರ್‌, ರಾಕೇಶ್‌‌‌ ಕುಮಾರ್‌‌ ಹಾಗೂ ಬಿಕ್ರಮ್‌‌ ಚಕ್ರವರ್ತಿ ಅವರನ್ನು ಒಳಗೊಂಡ ತಂಡ ಈ ಕಾರ್ಯಾಚರಣೆ ನಡೆಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.