ADVERTISEMENT

ಮಂಗಳೂರು ಗುಂಪು ಹತ್ಯೆಯಲ್ಲಿ ಮೃತ ಕೇರಳದ ಅಶ್ರಫ್‌ ಕುಟುಂಬಕ್ಕೆ ₹15 ಲಕ್ಷ ನೆರವು

​ಪ್ರಜಾವಾಣಿ ವಾರ್ತೆ
Published 8 ಜುಲೈ 2025, 19:28 IST
Last Updated 8 ಜುಲೈ 2025, 19:28 IST
<div class="paragraphs"><p>ಸಚಿವ ಜಮೀರ್ ಅಹಮದ್, ಸ್ಪೀಕರ್ ಯು.ಟಿ ಖಾದರ್ ಅವರನ್ನು ಭೇಟಿಯಾದ ಅಶ್ರಫ್ ಕುಟುಂಬ. ಕೇರಳದ ಮಂಜೇಶ್ವರ ಶಾಸಕ ಎ.ಕೆ ಅಶ್ರಫ್ ಇದ್ದರು</p></div>

ಸಚಿವ ಜಮೀರ್ ಅಹಮದ್, ಸ್ಪೀಕರ್ ಯು.ಟಿ ಖಾದರ್ ಅವರನ್ನು ಭೇಟಿಯಾದ ಅಶ್ರಫ್ ಕುಟುಂಬ. ಕೇರಳದ ಮಂಜೇಶ್ವರ ಶಾಸಕ ಎ.ಕೆ ಅಶ್ರಫ್ ಇದ್ದರು

   

ಮಂಗಳೂರು: ಗುಂಪು ಹಲ್ಲೆಯಿಂದ ಕುಡುಪುನಲ್ಲಿ ಹತ್ಯೆಯಾಗಿದ್ದ ಕೇರಳದ ಅಶ್ರಫ್‌ ಅವರ ಕುಟುಂಬಕ್ಕೆ ಸಚಿವ ಜಮೀರ್‌ ಅಹ್ಮದ್‌ ಖಾನ್‌ ₹10 ಲಕ್ಷ ಹಾಗೂ ವಿಧಾನಸಭೆಯ ಅಧ್ಯಕ್ಷ ಯು.ಟಿ.ಖಾದರ್‌ ₹5 ಲಕ್ಷ ವೈಯಕ್ತಿಕ ನೆರವು ನೀಡಿದರು.

ಬೆಂಗಳೂರಿನಲ್ಲಿಯ ಖಾದರ್‌ ಅವರ ಸರ್ಕಾರಿ ನಿವಾಸದಲ್ಲಿ ಅಶ್ರಫ್‌ ಅವರ ಮನೆಯವರಿಗೆ ಇತ್ತೀಚೆಗೆ ನೆರವು ಹಸ್ತಾಂತರಿಸಲಾಯಿತು.

ADVERTISEMENT

ಎಐಸಿಸಿ ಪ್ರಧಾನ ಕಾರ್ಯದರ್ಶಿ, ಸಂಸದ ಕೆ.ಸಿ.ವೇಣುಗೋಪಾಲ್ ಕೋರಿಕೆಯಂತೆ ಈ ನೆರವು ನೀಡಲಾಯಿತು. ಕುಟುಂಬಸ್ಥರೊಂದಿಗೆ ಈ ಮುಖಂಡರು ಚರ್ಚಿಸಿದರು. ಪ್ರಕರಣ ಕುರಿತು ಕಾನೂನು ಹೋರಾಟಕ್ಕೆ ವಿಶೇಷ ಅಭಿಯೋಜಕರನ್ನು ನೇಮಿಸಲು ಸರ್ಕಾರವನ್ನು ಕೋರಲು ತೀರ್ಮಾನಿಸಲಾಯಿತು ಎಂದು ಈ ಕುರಿತ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.