ADVERTISEMENT

ಮಂಗಳೂರಲ್ಲಿ ಖಾಸಗಿ ಇ– ಬಸ್‌ ಸೇವೆ ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2026, 7:18 IST
Last Updated 26 ಫೆಬ್ರುವರಿ 2026, 7:18 IST
ಎಲೆಕ್ಟ್ರಿಕ್‌ ಬಸ್‌ 
ಎಲೆಕ್ಟ್ರಿಕ್‌ ಬಸ್‌    

ಮಂಗಳೂರು: ನಗರದಲ್ಲಿ ಮೊದಲ ಬಾರಿ ಪರಿಸರ ಸ್ನೇಹಿ ವಿದ್ಯುತ್ ಚಾಲಿತ  ಬಸ್ ಸೇವೆ ಇದೇ 26ರಿಂದ (ಗುರುವಾರ) ಆರಂಭವಾಗಲಿದೆ. 

‘ಗಣೇಶ್‌ ಪ್ರಸಾದ್‌’ ಹೆಸರಿನಲ್ಲಿ ನಗರದಲ್ಲಿ ಖಾಸಗಿ ಬಸ್‌ ಸೇವೆ ನೀಡುತ್ತಿರುವ ದಿಲ್‌ರಾಜ್ ಆಳ್ವ ಅವರು ಎಲೆಕ್ಟ್ರಿಕ್‌ ಬಸ್‌ ಸೇವೆಯನ್ನು ಪರಿಚಯಿಸುತ್ತಿದ್ದಾರೆ. ಮಂಗಳಾದೇವಿ– ಅತ್ತಾವರ– ಸ್ಟೇಟ್‌ಬ್ಯಾಂಕ್‌ ಮಾರ್ಗದಲ್ಲಿ (ಮಾರ್ಗ ಸಂಖ್ಯೆ 27)  ಈ ಬಸ್‌ ಸಂಚರಿಸಲಿದೆ.  

‘ನಗರದಲ್ಲಿ ಪರಿಸರ ಸ್ನೇಹಿ ಬಸ್‌ ವ್ಯವಸ್ಥೆ ಜಾರಿಯಾಗಬೇಕು ಎಂಬ ಆಶಯದಿಂದ ಎಲೆಕ್ಟ್ರಿಕ್‌ ಬಸ್‌ ಸೇವೆಯನ್ನು ನ್ಯೂಟನ್‌ ಸಂಸ್ಥೆ ಜೊತೆ ಆರಂಭಿಸುತ್ತಿದ್ದೇವೆ. ಈ ಎಲೆಕ್ಟ್ರಿಕ್‌ ಬಸ್ ತ್ವರಿತ ಚಾರ್ಜಿಂಗ್ ವ್ಯವಸ್ಥೆಯಲ್ಲಿ ಎರಡೇ ಗಂಟೆಯಲ್ಲಿ ಪೂರ್ತಿ ಚಾರ್ಜ್‌ ಆಗಲಿದೆ. ನಿಧಾನಗತಿಯ ಚಾರ್ಜಿಂಗ್ ವ್ಯವಸ್ಥೆಯಲ್ಲಿ ಇದು ಪೂರ್ತಿ ಚಾರ್ಜ್ ಆಗಲು 5 ಗಂಟೆ ತಗಲುತ್ತದೆ. ಸದ್ಯಕ್ಕೆ ಪೆಟ್ರೋಲ್‌ ಬಂಕ್‌ಗಳಲ್ಲಿ ಲಭ್ಯ ಇರುವ ಚಾರ್ಜಿಂಗ್ ವ್ಯವಸ್ಥೆಯನ್ನೇ ಬಳಸಲಿದ್ದೇವೆ. ಒಮ್ಮೆ ಪೂರ್ತಿ ಚಾರ್ಜ್ ಆದರೆ ಗರಿಷ್ಠ 200 ಕಿ.ಮೀಗಳಷ್ಟು ಚಲಿಸಬಲ್ಲುದು. ಸಿಟಿ ಬಸ್‌ ಸೇವೆಗೆ ಇದು ಸಾಕಾಗುತ್ತದೆ’ ಎಂದು ದಿಲ್ ರಾಜ್ ಆಳ್ವ ‘ಪ್ರಜಾವಾಣಿ‘ಗೆ ತಿಳಿಸಿದರು.‌

ADVERTISEMENT

‘ಇದರ ಸಾಧಕ ಬಾಧಕ ನೋಡಿಕೊಂಡು ಇನ್ನಷ್ಟು ಎಲೆಕ್ಟ್ರಿಕ್‌ ಬಸ್‌ಗಳನ್ನು ಸೇವೆಗೆ ಬಳಸುವ ಚಿಂತನೆ ಇದೆ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.