ಉಳ್ಳಾಲದಲ್ಲಿ ಮನೆಗೆ ನುಗ್ಗಿದ ನೀರು
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆ ಗುರುವಾರ ರಾತ್ರಿ ಭಾರಿ ಮಳೆಯಾಗಿದ್ದು ಉಳ್ಳಾಲ ತಾಲ್ಲೂಕಿನ ಕೋಟೆಕಾರ್‌ನಲ್ಲಿ ಮೇ 30ರಂದು ಬೆಳಿಗ್ಗೆ 8.30ಕ್ಕೆ ಕೊನೆಗೊಂಡ 24 ತಾಸುಗಳಲ್ಲಿ ಅತ್ಯಧಿಕ 312.5 ಮಿಮೀ ಮಳೆ ದಾಖಲಾಗಿದೆ. ಜಿಲ್ಲೆಯ 20 ಕೇಂದ್ರಗಳಲ್ಲಿ 100 ಮಿಮೀಗಿಂತ ಹೆಚ್ಚು ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕೋಟೆಕಾರ್ ಸೇರಿದಂತೆ ಉಳ್ಳಾಲ ತಾಲ್ಲೂಕಿನ ನಾಲ್ಕು ಕೇಂದ್ರಗಳಲ್ಲಿ 200 ಮಿಮೀಗೂ ಅಧಿಕ ಮಳೆಯಾಗಿದೆ. ತಲಪಾಡಿಯಲ್ಲಿ 288, ಕಿನ್ಯದಲ್ಲಿ 282.5, ಮುನ್ನೂರಿನಲ್ಲಿ 263.5 ಮಿಮೀ ಮಳೆಯಾಗಿದೆ. ಬಂಟ್ವಾಳ ತಾಲ್ಲೂಕಿನ ಕುಕ್ಕಿಪಾಡಿ, ರಾಯಿ ಮತ್ತು ಸುಳ್ಯ ತಾಲ್ಲೂಕಿನ ಐವರ್ನಾಡು ಕೇಂದ್ರಗಳಲ್ಲಿ ಕಿನಿಷ್ಠ 64 ಮಿಮೀ ಮಳೆ ದಾಖಲಾಗಿದೆ ಎಂದು ಇಲಾಖೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.