
ಪ್ರಜಾವಾಣಿ ವಾರ್ತೆ
ಸುರತ್ಕಲ್: ಹಿಂದೂ ವಿದ್ಯಾದಾಯಿನೀ ಸಂಘ, ವಿದ್ಯಾದಾಯಿನೀ ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ತರಬೇತಿ ಸಂಸ್ಥೆ ಆಶ್ರಯದಲ್ಲಿ ಎರಡು ದಿನಗಳ ಹಲಸು–ಮಾವು ಮೇಳ, ಸ್ವಾವಲಂಬಿ ಸಂತೆ ವಿದ್ಯಾದಾಯಿನೀ ಪ್ರೌಢ ಶಾಲೆಯ ವಜ್ರ ಮಹೋತ್ಸವ ಸಭಾಂಗಣದಲ್ಲಿ ಶನಿವಾರ ಆರಂಭಗೊಂಡಿತು.
ಹಲಸಿನ ಹಣ್ಣಿನಿಂದ ಮಾಡಿದ ವಿವಿಧ ತಿನಿಸುಗಳು ಗಮನ ಸೆಳೆದವು. ಮನೆಯಲ್ಲೇ ತಯಾರಿಸಿದ ವಸ್ತುಗಳು, ಸ್ವ ಸಹಾಯ ಗುಂಪುಗಳು ತಯಾರಿಸಿದ ವಸ್ತುಗಳು, ಹಲವು ಬಗೆಯ ಸಸ್ಯ ವೈವಿಧ್ಯಗಳೂ ಮೇಳದಲ್ಲಿವೆ.
ಅಂಚೆ ಜನ ಸಂಪರ್ಕ ಅಭಿಯಾನ, ವಿವಿಧ ಸವಲತ್ತುಗಳ ಮಾಹಿತಿ, ಆಧಾರ್ ನೋಂದಣಿ, ತಿದ್ದುಪಡಿ ಉಚಿತವಾಗಿ ಮಾಡಿಸಲು ಅವಕಾಶ ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.