ADVERTISEMENT

ಮಂಗಳೂರು: ಮರ್ಕಝ್‌ನಿಂದ ಅಬ್ದುಲ್ ರಹಿಮಾನ್ ಕುಟುಂಬಕ್ಕೆ ₹50 ಸಾವಿರ ನೆರವು

​ಪ್ರಜಾವಾಣಿ ವಾರ್ತೆ
Published 3 ಜುಲೈ 2025, 13:50 IST
Last Updated 3 ಜುಲೈ 2025, 13:50 IST
ಬೆಂಗಳೂರಿನ ಮರ್ಕಝ್ ದಾರುಲ್ ಖಝಾ ವತಿಯಿಂದ, ಅಬ್ದುಲ್ ರಹಿಮಾನ್ ತಂದೆ ಅಬ್ದುಲ್ ಖಾದರ್ ಅವರಿಗೆ ನೆರವಿನ ಚೆಕ್ ಅನ್ನು ದಕ್ಷಿಣ ಕನ್ನಡ ಜಿಲ್ಲೆಯ ಮುಖಂಡರು ಹಸ್ತಾಂತರಿಸಿದರು
ಬೆಂಗಳೂರಿನ ಮರ್ಕಝ್ ದಾರುಲ್ ಖಝಾ ವತಿಯಿಂದ, ಅಬ್ದುಲ್ ರಹಿಮಾನ್ ತಂದೆ ಅಬ್ದುಲ್ ಖಾದರ್ ಅವರಿಗೆ ನೆರವಿನ ಚೆಕ್ ಅನ್ನು ದಕ್ಷಿಣ ಕನ್ನಡ ಜಿಲ್ಲೆಯ ಮುಖಂಡರು ಹಸ್ತಾಂತರಿಸಿದರು   

ಮಂಗಳೂರು: ಬೆಂಗಳೂರಿನ ಮರ್ಕಝ್ ದಾರುಲ್ ಖಝಾ ವತಿಯಿಂದ, ಇತ್ತೀಚೆಗೆ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಅಬ್ದುಲ್ ರಹಿಮಾನ್ ಕೊಳ್ತಮಜಲು ತಂದೆ ಅಬ್ದುಲ್ ಖಾದರ್ ಅವರಿಗೆ ₹50 ಸಾವಿರ ಮೊತ್ತದ ಚೆಕ್ ಅನ್ನು ಗುರುವಾರ ಹಸ್ತಾಂತರಿಸಲಾಯಿತು.

ದಾರುಲ್ ಖಝಾದ ಅಧ್ಯಕ್ಷ ಸಗೀರ್ ಸಾಹೇಬ್ ರಶಾದಿ ನಿರ್ದೇಶನದಂತೆ ಕುದ್ರೋಳಿ ಜಾಮಿಯಾ ಮಸೀದಿಯ ಖಾಜಿ ಶೈಖುನಾ ಮುತಹರ್ ಹುಸೇನ್ ಹಾಗೂ ಜಾಮಿಯಾ ಮಸೀದಿಯ ಅಧ್ಯಕ್ಷ ಕೆ.ಎಸ್. ಮೊಹಮ್ಮದ್ ಮಸೂದ್ ಮೂಲಕ ಚೆಕ್‌ ಅನ್ನು ನೀಡಲಾಯಿತು.

ಜಾಮಿಯಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಎಸ್.ಎ. ಖಲೀಲ್ ಅಹಮದ್, ಉಪಾಧ್ಯಕ್ಷ ಮಕ್ಬೂಲ್ ಅಹಮದ್, ಸದಸ್ಯರಾದ ಮೊಹಮ್ಮದ್ ಆರಿಫ್ ಮಸೂದ್, ದ.ಕ. ಮತ್ತು ಉಡುಪಿ ಜಿಲ್ಲಾ ದಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಹನೀಫ್, ಜಾಮಿಯಾ ಮಸೀದಿಯ ಜೊತೆ ಕಾರ್ಯದರ್ಶಿ ಆಸಿಫ್ ಸರ್ಫುದ್ದೀನ್ ಹಾಜರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.