ADVERTISEMENT

ಮೆಸ್ಕಾಂ: 1,084 ದೂರು ಇತ್ಯರ್ಥ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2025, 15:42 IST
Last Updated 1 ಮಾರ್ಚ್ 2025, 15:42 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಪ್ರಜಾವಾಣಿ ಚಿತ್ರ

ಮ೦ಗಳೂರು: ಮಂಗಳೂರು ವಿದ್ಯುತ್ ಸರಬರಾಜು ಕಂಪನಿಯು (ಮೆಸ್ಕಾಂ) 2024ರ ಏಪ್ರಿಲ್ 1ರಿಂದ ಡಿಸೆಂಬರ್ 31ರವರೆಗಿನ ಮೂರು ತ್ರೈಮಾಸಿಕಗಳಲ್ಲಿ ಒಟ್ಟು 150 ಜನ ಸಂಪರ್ಕ ಸಭೆ ನಡೆಸಿ, 1,084 ದೂರುಗಳನ್ನು ಇತ್ಯರ್ಥಪಡಿಸಿದೆ.

ADVERTISEMENT

ಒಟ್ಟು 1,100 ದೂರುಗಳು ಸಲ್ಲಿಕೆಯಾಗಿದ್ದವು. ಉಡುಪಿ ಜಿಲ್ಲೆಯಲ್ಲಿ  ಮೂರು ತ್ರೈಮಾಸಿಕದಲ್ಲಿ ಒಟ್ಟು 26 ಜನಸ೦ಪರ್ಕ ಸಭೆಗಳನ್ನು ನಡೆಸಿದ್ದು, 134 ದೂರುಗಳು ಸೀಕೃತವಾಗಿದ್ದವು. ಹಿ೦ದಿನ ಅವಧಿಯ 39 ದೂರುಗಳು ಸೇರಿ ಸೀಕೃತವಾದ ಒಟ್ಟು 173 ದೂರುಗಳಲ್ಲಿ, 143 ಇತ್ಯರ್ಥಗೊಳಿಸಲಾಗಿದ್ದು, 30 ದೂರುಗಳು ಬಾಕಿ ಉಳಿದಿವೆ ಎಂದು ಮೆಸ್ಕಾಂ ತಿಳಿಸಿದೆ.

ಶಿವಮೊಗ್ಗದಲ್ಲಿ 54 ಸಭೆಗಳನ್ನು ನಡೆಸಲಾಗಿದ್ದು, 199 ದೂರುಗಳನ್ನು ಸ್ವೀಕರಿಸಲಾಗಿದೆ.  ಹಿ೦ದಿನ ಅವಧಿಯ 20 ಸೇರಿ ಒಟ್ಟು 219 ದೂರುಗಳಲ್ಲಿ 204 ದೂರುಗಳನ್ನು ಇತ್ಯರ್ಥಗೊಳಿಸಿದ್ದು, 15 ಬಾಕಿ ಉಳಿದಿವೆ. ಚಿಕ್ಕಮಗಳೂರಿನಲ್ಲಿ 27  ಜನಸ೦ಪರ್ಕ ಸಭೆಗಳನ್ನು ನಡೆಸಿ, 250 ದೂರುಗಳನ್ನು ಸ್ವೀಕರಿಸಲಾಗಿದೆ. ಹಿ೦ದಿನ ಬಾಕಿ 55 ಸೇರಿ ಒಟ್ಟು 305 ದೂರುಗಳಲ್ಲಿ, 240  ದೂರುಗಳನ್ನು  ಇತ್ಯರ್ಥಪಡಿಸಿದ್ದು, 65 ಬಾಕಿ ಇವೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂರು ತ್ರೈಮಾಸಿಕದಲ್ಲಿ 517 ದೂರುಗಳು ಸೀಕೃತವಾಗಿವೆ.  ಹಿ೦ದಿನ ಅವಧಿಯ 575 ಸೇರಿದ೦ತೆ 1,092 ದೂರುಗಳಲ್ಲಿ 497  ದೂರುಗಳನ್ನು ಇತ್ಯರ್ಥಪಡಿಸಲಾಗಿದ್ದು, 595  ಬಾಕಿ ಇವೆ. ಆಡಳಿತಾತ್ಮಕ ವಿಚಾರಗಳು ಹಾಗೂ ಇತರ ಕಾರಣಗಳಿ೦ದಾಗಿ ಕೆಲವು ದೂರುಗಳು ಕಾಲಾವಕಾಶ ತೆಗೆದುಕೊಳ್ಳುತ್ತವೆ ಎಂದು ಮೆಸ್ಕಾಂ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.