ADVERTISEMENT

ಮೆಸ್ಕಾಂ ಜನ ಸಂಪರ್ಕ ಸಭೆ: ಹಳೆಯ ತಂತಿ ಬದಲಾವಣೆ, ಹೆಚ್ಚುವರಿ ಟಿಸಿಗೆ ಬೇಡಿಕೆ 

ಮೆಸ್ಕಾಂ ಜನಸಂಪರ್ಕ ಸಭೆಯಲ್ಲಿ ವಿದ್ಯುತ್ ಬಳಕೆದಾರರ ಅಹವಾಲು

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2026, 7:32 IST
Last Updated 13 ಫೆಬ್ರುವರಿ 2026, 7:32 IST
ಪುತ್ತೂರು ತಾಲ್ಲೂಕಿನ  ಕುಂಬ್ರ ಮೆಸ್ಕಾಂ ಗ್ರಾಮಾಂತರ ಉಪವಿಭಾಗ ಕಚೇರಿಯಲ್ಲಿ ಗುರುವಾರ ನಡೆದ ಮೆಸ್ಕಾಂ ಜನಸಂಪರ್ಕ ಸಭೆಯಲ್ಲಿ ಉಮಾನಾಥ ಶೆಟ್ಟಿ ಪೆರ್ನೆ ಮಾತನಾಡಿದರು
ಪುತ್ತೂರು ತಾಲ್ಲೂಕಿನ  ಕುಂಬ್ರ ಮೆಸ್ಕಾಂ ಗ್ರಾಮಾಂತರ ಉಪವಿಭಾಗ ಕಚೇರಿಯಲ್ಲಿ ಗುರುವಾರ ನಡೆದ ಮೆಸ್ಕಾಂ ಜನಸಂಪರ್ಕ ಸಭೆಯಲ್ಲಿ ಉಮಾನಾಥ ಶೆಟ್ಟಿ ಪೆರ್ನೆ ಮಾತನಾಡಿದರು   

ಪುತ್ತೂರು: ತಾಲ್ಲೂಕಿನ ಕುಂಬ್ರ ಮೆಸ್ಕಾಂ ಗ್ರಾಮಾಂತರ ಉಪವಿಭಾಗ ಕಚೇರಿಯಲ್ಲಿ ಗುರುವಾರ ನಡೆದ ಮೆಸ್ಕಾಂ ಪುತ್ತೂರು ಗ್ರಾಮಾಂತರ ಹಾಗೂ ನಗರ ಉಪ ವಿಭಾಗ ವ್ಯಾಪ್ತಿಯ ಜನಸಂಪರ್ಕ ಸಭೆಯಲ್ಲಿ ಹಲವು ಕಡೆಯ ವಿದ್ಯುತ್ ಬಳಕೆದಾರರು ವಿದ್ಯುತ್ ಲೈನಿನ ಹಳೆಯ ತಂತಿಗಳ ಬದಲಾವಣೆ ಹಾಗೂ ಹೆಚ್ಚುವರಿ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಅಳವಡಿಕೆಗೆ ಅಹವಾಲು ಸಲ್ಲಿಸಿದರು.

ಮೆಸ್ಕಾಂ ಜನ ಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿದ್ದ ಮೆಸ್ಕಾಂ ಪುತ್ತೂರು ವಿಭಾಗ ಕಚೇರಿಯ ಕಾರ್ಯನಿರ್ವಾಹಕ ಎಂಜಿನಿಯರ್ ರಾಮಚಂದ್ರ, ಅಹವಾಲುಗಳನ್ನು ಸ್ವೀಕರಿಸಿದರು.

ಕೆಯ್ಯೂರು ಗ್ರಾಮದ ಮಾಡಾವು ಗೌರಿಹೊಳೆ, ಕೊಳ್ತಿಗೆ ಗ್ರಾಮದ ಪಾಂಬಾರು ಮತ್ತು ಕಾವು ದೇವಸ್ಥಾನದ ಬಳಿ, ಬಡಗನ್ನೂರು ಗ್ರಾಮದ ನೇರೋಳಡ್ಕ ಪ್ರದೇಶಗಳಲ್ಲಿ ತಂತಿ ಬದಲಾವಣೆ ಮಾಡಬೇಕು ಎಂದು ಅಲ್ಲಿನ ವಿದ್ಯುತ್ ಬಳಕೆದಾರರು ಬೇಡಿಕೆ ಇಟ್ಟರು.

ADVERTISEMENT

ನೆಟ್ಟಣಿಗೆ ಮುಡ್ನೂರು ಗ್ರಾಮದ ಬಂಟುಕಲ್ಲು, ಕುಂಟಾಪು, ಅಶ್ವತ್ಥಡಿ, ಉಜಿರುಗುಣಿ ಮತ್ತು ಕೆಯ್ಯೂರು ಗ್ರಾಮದ ಕಟ್ಟತ್ತಾರು ಪ್ರದೇಶಗಳಲ್ಲಿ ಹೆಚ್ಚುವರಿ ಟಿ.ಸಿ ಆಗಬೇಕು ಎಂದು ಸ್ಥಳೀಯರು ಬೇಡಿಕೆ ಮುಂದಿಟ್ಟರು. ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ರಾಮಚಂದ್ರ ತಿಳಿಸಿದರು.

ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಪುತ್ತೂರು ತಾಲ್ಲೂಕು ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ ಮಾತನಾಡಿ, ಮೆಸ್ಕಾಂನ ಜೆಇ ಮಟ್ಟದಲ್ಲಿಯೇ ಸಲಹಾ ಸಮಿತಿಯ ಜತೆಗೂಡಿ ಜನ ಸಂಪರ್ಕ ಸಭೆಗಳನ್ನು ನಡೆಯಬೇಕು. ಆಗ ಗ್ರಾಮೀಣ ಪ್ರದೇಶದ ಸಮಸ್ಯೆಗಳನ್ನು ಪರಿಹರಿಸಲು ಸಹಾಯವಾಗುತ್ತದೆ ಎಂದರು.

ಮಳೆಗಾಲ ಆರಂಭಕ್ಕೆ ಮುಂಚಿತವಾಗಿಯೇ ವಿದ್ಯುತ್ ಸರಬರಾಜು ವ್ಯವಸ್ಥೆಗೆ ಸಮಸ್ಯೆ ತಂದೊಡ್ಡುತ್ತಿರುವ ಮರದ ಗೆಲ್ಲುಗಳನ್ನು ತೆರವುಗೊಳಿಸಬೇಕು ಎಂದರು.

ಮೆಸ್ಕಾಂ ಪುತ್ತೂರು ಗ್ರಾಮಾಂತರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸಿ.ಎಚ್.ಶಿವಶಂಕರ್, ಮೆಸ್ಕಾಂ ಸಲಹಾ ಸಮಿತಿ ಅಬ್ದುಲ್ ಕುಂಞ, ಯೋಗೀಶ್ ಸಾಮಾನಿ, ರವೀಂದ್ರ, ಮೋನಪ್ಪ ಗೌಡ, ಶ್ರೀನಿವಾಸ ನಾಯ್ಕ್, ಮೆಸ್ಕಾಂನ ಪುತ್ತೂರು ಗ್ರಾಮಾಂತರ ಉಪವಿಭಾಗದ ತಾಂತ್ರಿಕ ಸಹಾಯಕ ಎಂಜಿನಿಯರ್ ಗುರುದೇವಿ ಮಂತ್ರಣ್ಣನವರ್, ಶಾಖಾಧಿಕಾರಿ ರವೀಂದ್ರ ಎಂ., ಬೆಟ್ಟಂಪಾಡಿ ಶಾಖೆಯ ಪುತ್ತು ಜೆ., ಈಶ್ವರಮಂಗಲ ಶಾಖೆಯ ರಮೇಶ್ ಕೆ., ಸವಣೂರು ಶಾಖೆಯ ರಾಜೇಶ್ ಕುಮಾರ್ ಕೆ.ವಿ., ಪುತ್ತೂರು ಶಾಖೆಯ ಸಹಾಯಕ ಎಂಜಿನಿಯರ್ ರಾಜೇಶ್, ಉಪ್ಪಿನಂಗಡಿ ಶಾಖೆಯ ನಿತಿನ್, ಪುತ್ತೂರು 2 ಶಾಖೆಯ ಕಿರಿಯ ಎಂಜಿನಿಯರ್ ರಮೇಶ್ ಬಿ., ಬನ್ನೂರು ಶಾಖೆಯ ಪ್ರಭಾರ ಕಿರಿಯ ಎಂಜಿನಿಯರ್ ದುರ್ಗಾಸಿಂಗ್‌, ನಗರ ಉಪವಿಭಾಗದ ಪ್ರಭಾರ ಸಹಾಯಕ ಎಂಜಿನಿಯರ್ ಸ್ಮಿತಾ ಕೆ.ಎಸ್, ನಗರ ಉಪವಿಭಾಗದ ಸಹಾಯಕ ಲೆಕ್ಕಾಧಿಕಾರಿ ಕೃಷ್ಣಮೂರ್ತಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.