ADVERTISEMENT

ಎಂಐಎಗೆ ಅಪೆಕ್ಸ್ ಇಂಡಿಯಾ ಒಎಚ್ಎಸ್ ಪ್ಲಾಟಿನಂ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 7 ಮೇ 2024, 6:35 IST
Last Updated 7 ಮೇ 2024, 6:35 IST
ನವದೆಹಲಿಯಲ್ಲಿ ಈಚೆಗೆ ನಡೆದ ಸಮಾರಂಭದಲ್ಲಿ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಪರವಾಗಿ ಲೀಡ್ (ಕ್ಯುಎಚ್ಎಸ್ಇ) ವಿಜಯಮೋಹನ್ ಕೊಂಡೇಟಿ ಮತ್ತು ಲೀಡ್ (ಒಎಚ್ಎಸ್) ಜಿತುಮೋನ್ ಎನ್. ಆರ್. ಅವರು ಅಪೆಕ್ಸ್ ಇಂಡಿಯಾ ವೃತ್ತಿಪರ ಆರೋಗ್ಯ ಮತ್ತು ಸುರಕ್ಷತಾ ಪ್ಲಾಟಿನಂ ಪ್ರಶಸ್ತಿಯನ್ನು ಗಣ್ಯರಿಂದ ಸ್ವೀಕರಿಸಿದರು
ನವದೆಹಲಿಯಲ್ಲಿ ಈಚೆಗೆ ನಡೆದ ಸಮಾರಂಭದಲ್ಲಿ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಪರವಾಗಿ ಲೀಡ್ (ಕ್ಯುಎಚ್ಎಸ್ಇ) ವಿಜಯಮೋಹನ್ ಕೊಂಡೇಟಿ ಮತ್ತು ಲೀಡ್ (ಒಎಚ್ಎಸ್) ಜಿತುಮೋನ್ ಎನ್. ಆರ್. ಅವರು ಅಪೆಕ್ಸ್ ಇಂಡಿಯಾ ವೃತ್ತಿಪರ ಆರೋಗ್ಯ ಮತ್ತು ಸುರಕ್ಷತಾ ಪ್ಲಾಟಿನಂ ಪ್ರಶಸ್ತಿಯನ್ನು ಗಣ್ಯರಿಂದ ಸ್ವೀಕರಿಸಿದರು   

ಮಂಗಳೂರು: ಅಪೆಕ್ಸ್ ಇಂಡಿಯಾ ಫೌಂಡೇಶನ್ ವತಿಯಿಂದ ನೀಡುವ 2023ನೇ ಸಾಲಿನ 8ನೇ ಅಪೆಕ್ಸ್ ಇಂಡಿಯಾ ವೃತ್ತಿಪರ ಆರೋಗ್ಯ ಮತ್ತು ಸುರಕ್ಷತೆ (ಎಎಚ್‌ಎಸ್‌) ಪ್ಲಾಟಿನಂ ಪ್ರಶಸ್ತಿಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಭಾಜನವಾಗಿದೆ.

ವಿಮಾನ ನಿಲ್ದಾಣದ ಸಿಬ್ಬಂದಿಗೆ ಔದ್ಯೋಗಿಕ ಆರೋಗ್ಯ ಮತ್ತು ಸುರಕ್ಷತೆಯ ಅತ್ಯುನ್ನತ ಮಾನದಂಡಗಳನ್ನು ಕಾಯ್ದುಕೊಂಡಿದ್ದಕ್ಕಾಗಿ ಈ ಪ್ರಶಸ್ತಿ ಸಿಕ್ಕಿದೆ. ನವದೆಹಲಿಯಲ್ಲಿ ಈಚೆಗೆ ನಡೆದ ಸಮಾರಂಭದಲ್ಲಿ ವಿಮಾನ ನಿಲ್ದಾಣದ ಪರವಾಗಿ ಲೀಡ್ (ಕ್ಯುಎಚ್ಎಸ್ಇ) ವಿಜಯಮೋಹನ್ ಕೊಂಡೇಟಿ ಮತ್ತು ಲೀಡ್ (ಒಎಚ್ಎಸ್) ಜಿತುಮೋನ್ ಎನ್. ಆರ್. ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು.

‘ವಿಮಾನ ನಿಲ್ದಾಣವು ವಾಣಿಜ್ಯ ಕಾರ‍್ಯಾಚರಣೆಯನ್ನು ಆರಂಭಿಸಿದ ದಿನದಿಂದಲೂ ಸದೃಢವಾದ ಸುರಕ್ಷತಾ ಕ್ರಮಗಳನ್ನು ಅನುಸರಿಸುತ್ತಿದೆ. ವಿಮಾನ ನಿಲ್ದಾಣದಲ್ಲಿ ಕೆಲಸದ ವೇಳೆ ಯಾವುದೇ ಅವಘಡ ಸಂಭವಿಸದಂತೆ ಎಚ್ಚರ ವಹಿಸಲಾಗಿದೆ. ದೇಶದ ಸುರಕ್ಷಿತವಾದ ಟೇಬಲ್‌ಟಾಪ್ ವಿಮಾನ ನಿಲ್ದಾಣವನ್ನಾಗಿ ರೂಪಿಸುವ ‘ವಿಷನ್ 2025’ಗೆ ಪೂರಕವಾಗಿ ತರಬೇತಿ ಮತ್ತು ನಿರಂತರ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ’ ಎಂದು ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ.

ADVERTISEMENT

ಪ್ರಶಸ್ತಿ ಸಮಾರಂಭದಲ್ಲಿ 60ಕ್ಕೂ ಹೆಚ್ಚು ಕಂಪನಿಗಳ 200 ಪ್ರತಿನಿಧಿಗಳು ಭಾಗವಹಿಸಿದ್ದರು ಎಂದು ವಿಮಾನನಿಲ್ದಾಣದ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.