ADVERTISEMENT

Dharmasthala Case: ಕಾಂಗ್ರೆಸ್‌ ಮುಖಂಡರಿಂದ ಧರ್ಮಸ್ಥಳ ಭೇಟಿ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2025, 5:12 IST
Last Updated 4 ಸೆಪ್ಟೆಂಬರ್ 2025, 5:12 IST
ಶಾಸಕ ಕೆ. ಹರೀಶ್ ಗೌಡರ ನೇತೃತ್ವದಲ್ಲಿ ಎರಡು ಸಾವಿರ ಮಂದಿ ಭಕ್ತರು ಹಾಗೂ ಅಭಿಮಾನಿಗಳು ಬುಧವಾರ ಸಂಜೆ ಧರ್ಮಸ್ಥಳಕ್ಕೆ ಆಗಮಿಸಿದರು
ಶಾಸಕ ಕೆ. ಹರೀಶ್ ಗೌಡರ ನೇತೃತ್ವದಲ್ಲಿ ಎರಡು ಸಾವಿರ ಮಂದಿ ಭಕ್ತರು ಹಾಗೂ ಅಭಿಮಾನಿಗಳು ಬುಧವಾರ ಸಂಜೆ ಧರ್ಮಸ್ಥಳಕ್ಕೆ ಆಗಮಿಸಿದರು    

ಉಜಿರೆ: ಮೈಸೂರಿನ ಚಾಮರಾಜ ಕ್ಷೇತ್ರದ ಶಾಸಕ ಕೆ.ಹರೀಶ್ ಗೌಡರ ನೇತೃತ್ವದಲ್ಲಿ ಸಾವಿರಾರು ಭಕ್ತರು ಹಾಗೂ ಅಭಿಮಾನಿಗಳು ಬುಧವಾರ ಧರ್ಮಸ್ಥಳಕ್ಕೆ ಭೇಟಿ ನೀಡಿದರು.

50 ವಾಹನಗಳಲ್ಲಿ ಬಂದ ಭಕ್ತರನ್ನು ಮುಖ್ಯಪ್ರವೇಶದ್ವಾರದ ಬಳಿ ಸ್ವಾಗತಿಸಲಾಯಿತು. ಬಳಿಕ ದೇವರ ದರ್ಶನ ಮಾಡಿ ಪ್ರಸಾದ ಸ್ವೀಕರಿಸಿದರು. 

ಗುರುವಾರ ಬೆಳಿಗ್ಗೆ 9 ಗಂಟೆಗೆ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಲಾಗುವುದು. ಧರ್ಮಸ್ಥಳದ ಬಗ್ಗೆ ನಡೆಯುತ್ತಿರುವ ಅಪಪ್ರಚಾರವನ್ನು ಖಂಡಿಸಿ ಸರ್ವಧರ್ಮ ಸಮನ್ವಯ ಕ್ಷೇತ್ರದ ರಕ್ಷಣೆ ಹಾಗೂ ಪಾವಿತ್ರ್ಯ ಕಾಪಾಡಲು ನಮ್ಮ ಬೆಂಬಲವಿದೆ ಎಂದು ಶಾಸಕ ಕೆ.ಹರೀಶ್ ಗೌಡ ತಿಳಿಸಿದ್ದಾರೆ.

ADVERTISEMENT

ಕರ್ನಾಟಕ ರಾಜ್ಯ ಪತ್ತಿನ ಸಹಕಾರಿ ಮಹಾಮಂಡಲದ ಅಧ್ಯಕ್ಷ ಚಂದ್ರಶೇಖರ, ಮೈಸೂರಿನ ಮಾಜಿ ಮೇಯರ್ ಪುಷ್ಪಲತಾಚಿಕ್ಕಣ್ಣ, ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ರಮೇಶರಾಯಪ್ಪ, ಪಕ್ಷದ ಮುಖಂಡರಾದ ಮಂಜುನಾಥ, ರವಿ, ಪುಷ್ಪವಲ್ಲಿ ಮೊದಲಾದವರು ಇದ್ದರು.

ಶಾಸಕ ಕೆ. ಹರೀಶ್ ಗೌಡರ ನೇತೃತ್ವದಲ್ಲಿ ಎರಡು ಸಾವಿರ ಮಂದಿ ಭಕ್ತರು ಹಾಗೂ ಅಭಿಮಾನಿಗಳು ಬುಧವಾರ ಸಂಜೆ ಧರ್ಮಸ್ಥಳಕ್ಕೆ ಆಗಮಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.