ADVERTISEMENT

ಅಭ್ಯರ್ಥಿಗಳನ್ನು ಅರಸಿ ಬರುವ ಕಂಪನಿಗಳು: ವಿಕಾಸ್ ಜೈನ್

​ಪ್ರಜಾವಾಣಿ ವಾರ್ತೆ
Published 26 ಜುಲೈ 2022, 5:46 IST
Last Updated 26 ಜುಲೈ 2022, 5:46 IST
ಮೂಡುಬಿದಿರೆಯ ಮಹಾವೀರ ಕಾಲೇಜಿನಲ್ಲಿ ಸೋಮವಾರ ಉದ್ಯೋಗ ಮೇಳವನ್ನು ವಿಕಾಸ್ ಜೈನ್ ಉದ್ಘಾಟಿಸಿದರು. ಅಭಯಚಂದ್ರ ಜೈನ್ ಇದ್ದರು.
ಮೂಡುಬಿದಿರೆಯ ಮಹಾವೀರ ಕಾಲೇಜಿನಲ್ಲಿ ಸೋಮವಾರ ಉದ್ಯೋಗ ಮೇಳವನ್ನು ವಿಕಾಸ್ ಜೈನ್ ಉದ್ಘಾಟಿಸಿದರು. ಅಭಯಚಂದ್ರ ಜೈನ್ ಇದ್ದರು.   

ಮೂಡುಬಿದಿರೆ: ಹಿಂದೆ ಅಭ್ಯರ್ಥಿಗಳು ಉದ್ಯೋಗಕ್ಕಾಗಿ ಕಂಪನಿಗಳನ್ನು ಹುಡುಕಿಕೊಂಡು ಹೋಗುತ್ತಿದ್ದರು. ಈಗ ಕಾಲ ಬದಲಾಗಿದ್ದು, ಕಂಪನಿಗಳೇ ಅಭ್ಯರ್ಥಿಗಳನ್ನು ಹುಡುಕಿಕೊಂಡು ಬರುತ್ತಿವೆ. ಅರ್ಹರಿಗೆ ಒಳ್ಳೆಯ ಉದ್ಯೋಗಾವಕಾಶಗಳು ಸಿಗುತ್ತಿವೆ ಎಂದು ಉದ್ಯಮಿ, ಮಹಾವೀರ ಕಾಲೇಜಿನ ಹಳೆ ವಿದ್ಯಾರ್ಥಿ ವಿಕಾಸ್ ಜೈನ್ ಹೇಳಿದರು.

ಮಹಾವೀರ ಕಾಲೇಜಿನಲ್ಲಿ ಸೋಮವಾರ ನಡೆದ ಐಕ್ಯೂಎಸಿ ಮತ್ತು ಪ್ಲೇಸ್‌ಮೆಂಟ್‌ ಸೆಲ್ ನಡೆಸಿದ ‘ಜಾಬ್ ಫೇರ್ 2022’ ಉದ್ಘಾಟಿಸಿ ಅವರು ಮಾತನಾಡಿದರು.

ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಅಭಯಚಂದ್ರ ಜೈನ್ ಮಾತನಾಡಿ, ‘ಉತ್ತಮ ಶಿಕ್ಷಣ ಸಂಸ್ಥೆಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಉದ್ಯೋಗವಕಾಶಗಳು ಹೆಚ್ಚಾಗಲು ಕಾರಣ. ಮಹಾವೀರ ಕಾಲೇಜು ಕೆಲವು ವರ್ಷಗಳಿಂದ ವಿದ್ಯಾರ್ಥಿಗಳಿಗೆ ಉದ್ಯೋಗವಕಾಶವನ್ನು ಒದಗಿಸುತ್ತಿದೆ’ ಎಂದರು.

ADVERTISEMENT

ಪದವಿ ಕಾಲೇಜಿನ ಪ್ರಾಚಾರ್ಯ ಡಾ.ರಾಧಾಕೃಷ್ಣ ಶೆಟ್ಟಿ, ಪದವಿಪೂರ್ವ ಕಾಲೇಜು ಪ್ರಾಚಾರ್ಯ ಪ್ರೊ.ಎಂ.ರಮೇಶ್ ಭಟ್, ಐಕ್ಯೂಎಸಿ ಸಂಯೋಜಕಿ ನಳಿನಿ, ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಪ್ರೊ.ಹರೀಶ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಾಗರಾಜ್ ಉಪಸ್ಥಿತರಿದ್ದರು. ಪ್ಲೇಸ್‌ಮೆಂಟ್‌ ಸಂಯೋಜಕಿ ಶ್ವೇತಾ ಭಟ್ ಸ್ವಾಗತಿಸಿದರು. ಸುಷ್ಮಾ
ಬಂಗೇರಾ ನಿರೂಪಿಸಿದರು. ಶ್ರೀಗೌರಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.