ADVERTISEMENT

ಕಡಂದಲೆ ಶಾಲೆಗೆ ಶೌಚಾಲಯಕ್ಕೆ ಆಗ್ರಹ

ಪಾಲಡ್ಕ ಗ್ರಾಮ ಪಂಚಾಯಿತಿ ಮಕ್ಕಳ ಗ್ರಾಮ ಸಭೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2026, 6:57 IST
Last Updated 24 ಜನವರಿ 2026, 6:57 IST
ಮೂಡುಬಿದಿರೆಯ ಪಾಲಡ್ಕ ಪಂಚಾಯಿತಿಯ ಮಕ್ಕಳ ಗ್ರಾಮ ಸಭೆ ಶುಕ್ರವಾರ ನಡೆಯಿತು
ಮೂಡುಬಿದಿರೆಯ ಪಾಲಡ್ಕ ಪಂಚಾಯಿತಿಯ ಮಕ್ಕಳ ಗ್ರಾಮ ಸಭೆ ಶುಕ್ರವಾರ ನಡೆಯಿತು   

ಮೂಡುಬಿದಿರೆ: ಪಾಲಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ 2025-26ನೇ ಸಾಲಿನ ಮಕ್ಕಳ ಗ್ರಾಮ ಸಭೆ ಕಡಂದಲೆ ಪಲ್ಕೆ ಗಣೇಶ್ ದರ್ಶನ್ ಸಭಾಭವನದಲ್ಲಿ ಸಭಾಧ್ಯಕ್ಷ ವಿದ್ಯಾರ್ಥಿ ಭವಿಷ್ ಅವರ ನೇತೃತ್ವದಲ್ಲಿ ಶುಕ್ರವಾರ ನಡೆಯಿತು.

ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಸಮಸ್ಯೆ ಹಾಗೂ ಬೇಡಿಕೆಗಳನ್ನು ಮಂಡಿಸಿದರು. ಕಡಂದಲೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾಗಿರಿಯ ವಿದ್ಯಾರ್ಥಿಗಳೂ ಶೌಚಾಲಯ ನಿರ್ಮಾಣ, ಹೆಚ್ಚುವರಿ ಕೊಠಡಿ ವ್ಯವಸ್ಥೆ ಹಾಗೂ ಕಂಪ್ಯೂಟರ್ ಪ್ರಿಂಟರ್ ಒದಗಿಸುವಂತೆ ಮನವಿ ಮಾಡಿದರು.

ಕಡಂದಲೆ ಸರ್ಕಾರಿ ಹಿರಿಯ ಪ್ರಾಥಮಿಕ ಮೈನ್ ಶಾಲೆಯ ವಿದ್ಯಾರ್ಥಿಗಳು ಕಂಪ್ಯೂಟರ್ ವ್ಯವಸ್ಥೆ ಕಲ್ಪಿಸುವಂತೆ ಬೇಡಿಕೆ ಮುಂದಿಟ್ಟರು. ಪಾಲಡ್ಕ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೇಮಾರಿನ ವಿದ್ಯಾರ್ಥಿಗಳೂ ಶಾಲಾ ವಠಾರಕ್ಕೆ ನಾಮಫಲಕ ಅಳವಡಿಕೆ, ರಸ್ತೆ ಉಬ್ಬು ವ್ಯವಸ್ಥೆ ಹಾಗೂ ಆಟದ ಮೈದಾನ ಕಲ್ಪಿಸುವಂತೆ ಒತ್ತಾಯಿಸಿದರು.

ADVERTISEMENT

ಕಡಂದಲೆ ಸುಬ್ರಹ್ಮಣ್ಯ ಪ್ರೌಢಶಾಲೆಯ ವಿದ್ಯಾರ್ಥಿಗಳು ಗ್ರಂಥಾಲಯಕ್ಕೆ ಹೆಚ್ಚುವರಿ ಪುಸ್ತಕ ಒದಗಿಸುವಂತೆ ಕೋರಿದರು.

ಪಾಲಡ್ಕ ಪಂಚಾಯತಿ ಅಧ್ಯಕ್ಷೆ ಅಮಿತಾ ನಾಯ್ಕ, ಉಪಾಧ್ಯಕ್ಷರಾದ ಪ್ರವೀಣ್ ಸೀಕ್ವೆರ, ಸದಸ್ಯರು, ಶಿಕ್ಷಣ ಇಲಾಖೆಯ ರಾಜೇಶ್ವರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವೀಣಾ, ಪಾಲಡ್ಕ ಆರೋಗ್ಯ ಇಲಾಖೆಯ ಶ್ವೇತಾ, ಸಂಪನ್ಮೂಲ ವ್ಯಕ್ತಿ ಸುಧಾಕರ್ ಪೋಸ್ರಲ್, ಪಂಚಾಯಿತಿ ಕಾರ್ಯದರ್ಶಿ ಮೋಹಿನಿ ಶೆಟ್ಟಿ, ಪಂಚಾಯಿತಿ ಸಿಬ್ಬಂದಿ, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.

ಪಿಡಿಒ ಮಂಜುಳ ಹುನಗುಂದ ನಿರೂಪಿಸಿದರು. ಕಸ್ವಿ ಸ್ವಾಗತಿಸಿದರು. ಸಮೀಕ್ಷಾ ಧನ್ಯವಾದ ಸಲ್ಲಿಸಿದರು.

ಮೂಡುಬಿದಿರೆಯ ಪಾಲಡ್ಕ ಪಂಚಾಯಿತಿಯ ಮಕ್ಕಳ ಗ್ರಾಮ ಸಭೆ ಶುಕ್ರವಾರ ನಡೆಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.