ADVERTISEMENT

ಗ್ರಾಮ ಸಹಾಯಕ ನೇಣು ಹಾಕಿಕೊಂಡು ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 29 ಜುಲೈ 2021, 12:06 IST
Last Updated 29 ಜುಲೈ 2021, 12:06 IST
ನಿತಿನ್
ನಿತಿನ್   

ಮುಡಿಪು: ಅಂಬ್ಲಮೊಗರು ಗ್ರಾಮದ ಗ್ರಾಮ ಸಹಾಯಕ (ಉಗ್ರಾಣಿ) ತನ್ನ ಮನೆಯಲ್ಲಿ ಗುರುವಾರ ಬೆಳಿಗ್ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅಂಬ್ಲಮೊಗರುವಿನ ಪಡ್ಯಾರಮನೆ ಗುತ್ತಿನ ನಿತಿನ್ ಶೆಟ್ಟಿ (34) ಮೃತರು.

ಮದಕದಲ್ಲಿರುವ ತನ್ನ ನಿವಾಸದ ಮಾಲಿಗೆಯಲ್ಲಿ ಬೆಡ್‌ರೂಮಿನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಹಲವು ವರ್ಷದಿಂದ ಗ್ರಾಮ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು.

ADVERTISEMENT

ನಿತಿನ್ ಅವರು ಮೂರು ವರ್ಷದ ಹಿಂದಷ್ಟೆ ಮದುವೆಯಾಗಿದ್ದು, ಗುರುವಾರ ಬೆಳಿಗ್ಗೆ ಪತ್ನಿಯನ್ನು ದ್ವಿಚಕ್ರ ವಾಹನದಲ್ಲಿ ಕುತ್ತಾರಿನವರೆಗೆ ಕೆಲಸಕ್ಕೆ ಬಿಟ್ಟು ಬಂದಿದ್ದರು. ಬಳಿಕ ಮನೆಗೆ ವಾಪಸಾದ ನಿತಿನ್ ನೇಣಿಗೆ ಶರಣಾಗಿದ್ದಾರೆ. ಬೆಳಿಗ್ಗೆ 9.30 ವರೆಗೂ ಕೊಣೆಯಿಂದ ಹೊರಗೆ ಬರದೇ ಇದ್ದಾಗ ಅನುಮಾನಗೊಂಡ ತಾಯಿ ಹೋಗಿ ನೋಡಿದಾಗ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.

ನಿತಿನ್ ಅವರಿಗೆ ತಾಯಿ, ಪತ್ನಿ, ಮೂರು ಸಹೋದರರು ಇದ್ದಾರೆ. ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.