ADVERTISEMENT

ಮೂಲ್ಕಿ: ಅರಸು ಪ್ರಶಸ್ತಿ- ಸಾಧಕರ ಆಯ್ಕೆ 

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2025, 7:59 IST
Last Updated 16 ಡಿಸೆಂಬರ್ 2025, 7:59 IST
<div class="paragraphs"><p>ಸಾದರ ಸ್ವೀಕಾರ</p></div>

ಸಾದರ ಸ್ವೀಕಾರ

   

ಮೂಲ್ಕಿ: ಇಲ್ಲಿನ ಮೂಲ್ಕಿ ಅರಮನೆ ವೆಲ್ಫೇರ್ ಚಾರಿಟಬಲ್ ಟ್ರಸ್ಟ್ ಮತ್ತು ಪ್ರಿಯದರ್ಶಿನಿ ಕೊ–ಆಪರೇಟಿವ್ ಸೊಸೈಟಿ ನೀಡುವ 3ನೇ ವರ್ಷದ ಅರಸು ಪ್ರಶಸ್ತಿ–2025ಕ್ಕೆ ವಿವಿಧ ಕ್ಷೇತ್ರಗಳ ಸಾಧಕರನ್ನು ಹಾಗೂ ಸಂಸ್ಥೆಗಳನ್ನು ಆಯ್ಕೆ ಮಾಡಲಾಗಿದೆ.

ಕಂಬಳ ಕ್ಷೇತ್ರ (ಮರಣೋತ್ತರ ಪ್ರಶಸ್ತಿ): ದಿ.ಪಿ.ಸುಂದರ ದೇವಾಡಿಗ. ಸಾಧನಾ ಪ್ರಶಸ್ತಿ: ಮೋಹನ್ ದಾಸ್ ಸುರತ್ಕಲ್. ಶೈಕ್ಷಣಿಕ ಕ್ಷೇತ್ರ: ಪ್ರೇಮಲತಾ, ವಸಂತಿ ಕುಮಾರಿ. ಸಾಹಿತ್ಯ: ಹರಿಶ್ಚಂದ್ರ ಪಿ.ಸಾಲ್ಯಾನ್. ಕೃಷಿ: ಸತೀಶ್ ರಾವ್ ಪಡುಪಣಂಬೂರು, ವೈದ್ಯಕೀಯ: ಡಾ. ಶಿವಾನಂದ ಪ್ರಭು, ಯಕ್ಷಗಾನ: ಶಿವರಾಮ್ ಪಣಂಬೂರು, ಸಾಂಸ್ಕೃತಿಕ: ರಾಜೇಶ್ ಕೆಂಚನಕೆರೆ. ದೈವಾರಾಧನೆ: ಗೋಪಾಲ ನಾಯ್ಕರು ಗುಡ್ಡೆಯಂಗಡಿ. ಧಾರ್ಮಿಕ: ವಿದ್ವಾನ್ ರಘುಪತಿ ರಾವ್ ಎಸ್., ಸಹಕಾರಿ ಕ್ಷೇತ್ರ: ಗುರುದೇವ ವಿವಿಧೋದ್ದೇಶ ಸಹಕಾರ ಸಂಘ ಹಳೆಯಂಗಡಿ.  ಸರ್ಕಾರಿ ಕ್ಷೇತ್ರ: ಕಿಶೋರ್ ಕುಮಾರ್ ಎಂ.ಕೋಟ್ಯಾನ್, ಕ್ರೀಡೆ: ಕೀರ್ತನ್ ಕಟೀಲು. ಸಾಮಾಜಿಕ ಕ್ಷೇತ್ರ: ನಾಗೇಶ್ ಡಿ.ಬಂಗೇರ, ಪ್ರಕಾಶ್ ಆಚಾರ್ಯ ಕಿನ್ನಿಗೋಳಿ. ಸಂಘ ಸಂಸ್ಥೆಗಳ ವಿಭಾಗ: ಶ್ರೀವಿನಾಯಕ ಮಿತ್ರ ಮಂಡಳಿ ಪಕ್ಷಿಕೆರೆ, ಫೇಮಸ್ ಕ್ಲಬ್ ತೋಕೂರು ಪ್ರಶಸ್ತಿಗೆ ಆಯ್ಕೆಯಾಗಿದೆ.

ADVERTISEMENT

ಡಿ.28ರಂದು ಮೂಲ್ಕಿ ಸೀಮೆ ಅರಸ ಎಂ.ದುಗ್ಗಣ್ಣ ಸಾವಂತರ ಮಾರ್ಗದರ್ಶನದಲ್ಲಿ ಅರಮನೆಯ ಧರ್ಮ ಚಾವಡಿಯಲ್ಲಿ ಪ್ರಶಸ್ತಿ ಪುರಸ್ಕಾರದ ಕಾರ್ಯಕ್ರಮ ನಡೆಯಲಿದೆ ಎಂದು ಟ್ರಸ್ಟ್‌ನ ಅಧ್ಯಕ್ಷ ಗೌತಮ್ ಜೈನ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.