ADVERTISEMENT

ಸನ್ಮಾನಕ್ಕೆ ಸಂಗೀತ ಗುರು ರೋಶನ್ ಆಯ್ಕೆ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2022, 14:11 IST
Last Updated 26 ಸೆಪ್ಟೆಂಬರ್ 2022, 14:11 IST
ರೋಶನ್ ಫ್ರಾನ್ಸಿಸ್ ಮಾರ್ಟಿಸ್
ರೋಶನ್ ಫ್ರಾನ್ಸಿಸ್ ಮಾರ್ಟಿಸ್   

ಮಂಗಳೂರು: ಮಾಂಡ್ ಸೊಭಾಣ್ ಮತ್ತು ಸುಮೇಳ್ ಗಾಯನ ತಂಡನೀಡುವ 2022ನೇ ಸಾಲಿನ ಅಂತರರಾಷ್ಟ್ರೀಯ ಸಂಗೀತ ದಿನದ ಸನ್ಮಾನಕ್ಕೆ ಸಂಗೀತ ತಜ್ಞ ಮತ್ತು ತರಬೇತುದಾರ ರೋಶನ್ ಫ್ರಾನ್ಸಿಸ್ ಮಾರ್ಟಿಸ್ ಕದ್ರಿ ಆಯ್ಕೆಯಾಗಿದ್ದಾರೆ.

ಹಿಂದೂಸ್ತಾನಿ ಶಾಸ್ತ್ರೀಯ ಗಾಯನದಲ್ಲಿ ಸಂಗೀತ ವಿಶಾರದ ಪದವಿ ಪಡೆದಿರುವ ಮಾರ್ಟಿಸ್, 1994ರಿಂದ ಸಂಗೀತ ಗುರುವಾಗಿ, ಲೇಖಕರಾಗಿ ಛಾಪು ಮೂಡಿಸಿದ್ದಾರೆ. ಮಂಗಳೂರಿನ ಕದ್ರಿಯಲ್ಲಿ ‘ಸುರ್ ರಂಗ್’ ಸಂಗೀತ ಶಾಲೆ ಸ್ಥಾಪಿಸಿ, ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT