ADVERTISEMENT

ನಾರಾಯಣ ಗುರು ರಾಜಕೀಯ ಸರಕಲ್ಲ: ಡಾ. ತುಕರಾಮ ಪೂಜಾರಿ

ಅಳದಂಗಡಿಯಲ್ಲಿ ಗುರುಜಯಂತಿ ಕಾರ್ಯಕ್ರಮದಲ್ಲಿ ಡಾ. ತುಕರಾಮ ಪೂಜಾರಿ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2022, 4:31 IST
Last Updated 19 ಸೆಪ್ಟೆಂಬರ್ 2022, 4:31 IST
ಅಳದಂಗಡಿ ನಮನ ಸಭಾಭವನದಲ್ಲಿ ಬ್ರಹ್ಮ ಶ್ರೀ ನಾರಾಯಣ ಸ್ವಾಮಿಗಳ ಗುರು ಪೂಜಾ ಸಭಾ ಕಾರ್ಯಕ್ರಮವನ್ನು  ಕೆ. ವಸಂತ ಬಂಗೇರ ಉದ್ಘಾಟಿಸಿದರು.
ಅಳದಂಗಡಿ ನಮನ ಸಭಾಭವನದಲ್ಲಿ ಬ್ರಹ್ಮ ಶ್ರೀ ನಾರಾಯಣ ಸ್ವಾಮಿಗಳ ಗುರು ಪೂಜಾ ಸಭಾ ಕಾರ್ಯಕ್ರಮವನ್ನು  ಕೆ. ವಸಂತ ಬಂಗೇರ ಉದ್ಘಾಟಿಸಿದರು.   

ಬೆಳ್ತಂಗಡಿ: ‘ಜಗತ್ತಿನ ಶ್ರೇಷ್ಠ ಸಂತರಾದ ನಾರಾಯಣ ಗುರುಗಳನ್ನು ರಾಜಕೀಯದ ಸರಕಾಗಿಸಬಾರದು’ ಎಂದು ಬಂಟ್ವಾಳ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ. ತುಕರಾಮ ಪೂಜಾರಿ ಹೇಳಿದರು.

ಅಳದಂಗಡಿಯಲ್ಲಿ ನಡೆದ ಬ್ರಹ್ಮಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ವಲಯ ವ್ಯಾಪ್ತಿಯ ಗ್ರಾಮ ಸಮಿತಿಗಳ ಆಶ್ರಯದಲ್ಲಿ ನಡೆದ ಸತ್ಯ ನಾರಾಯಣ ಪೂಜೆ, ಗುರುಪೂಜೆ ಮತ್ತು ಅಶಕ್ತರಿಗೆ ಆರ್ಥಿಕ ನೆರವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ ಆರ್. ಮಾತನಾಡಿ, ‘ರಾಜಕೀಯಕ್ಕೆ ನಾವು ಬಲಿಪಶುವಾಗಬಾರದು. ನಾರಾಯಣ ಗುರುಗಳ ತತ್ವ ಸಂದೇಶಕ್ಕೆ ಪೆಟ್ಟು ಬಿದ್ದಾಗ ಒಗ್ಗಟ್ಟಾಗಿ ಪ್ರತಿರೋಧ ವ್ಯಕ್ತಪಡಿಸಬೇಕು’ ಎಂದರು.‌

ADVERTISEMENT

ಅಳದಂಗಡಿ ವಲಯ ಸಮಿತಿಯ ಅಧ್ಯಕ್ಷ ಸಂಜೀವ ಪೂಜಾರಿ ಗುರುದೇವ ಕೊಡಂಗೆ ಅಧ್ಯಕ್ಷತೆ ವಹಿಸಿದ್ದರು.

ಚಿದಾನಂದ ಪೂಜಾರಿ ಎಲ್ದಕ್ಕ, ಗಂಗಾಧರ ಮಿತ್ತಮಾರ್, ಜಯ ವಿಕ್ರಮ್, ಪುಷ್ಪಾವತಿ ನಾವರ, ವಸಂತಿ ಸಿ. ಪೂಜಾರಿ, ಡಾ. ಹರಿಪ್ರಸಾದ್ ಸುವರ್ಣ, ನಿತೇಶ್ ಎಚ್., ರಕ್ಷಿತ್ ಶಿವರಾಂ, ಕೊರಗಪ್ಪ ಪೂಜಾರಿ ಪಿಲ್ಯ, ವಿಶ್ವನಾಥ ಪೂಜಾರಿ ಕುದ್ಯಾಡಿ, ಕೊರಗಪ್ಪ ಪೂಜಾರಿ ಸುಳ್ಕೆರಿ, ನವೀನ್ ಕುಮಾರ್ ನಾವರ, ಅರುಣಾ ಕೋಟ್ಯಾನ್, ಸಂಕೇತ್ ಬಂಗೇರ, ನಿತ್ಯಾನಂದ ನಾವರ, ಸಮೀಕ್ಷಾ ಬಾರ್ಲೋಡಿ, ಸಂದೀಪ್ ನೀರಲ್ಕೆ ಇದ್ದರು.

ನಿರಂಜನ ಶಾಂತಿ ಕೊಹಿನೂರು ತಂಡದಿಂದ ಪೂಜಾ ಕಾರ್ಯಕ್ರಮ, ಬಳಂಜ ಬ್ರಹ್ಮಶ್ರೀ ಮಹಿಳಾ ವೇದಿಕೆ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.