ADVERTISEMENT

ನೆಲ್ಲಿತೀರ್ಥ: ಗುಹಾತೀರ್ಥ ಸ್ನಾನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2024, 12:40 IST
Last Updated 17 ಅಕ್ಟೋಬರ್ 2024, 12:40 IST
ಬಜಪೆ ಸಮೀಪದ ನೆಲ್ಲಿತೀರ್ಥ ಸೋಮನಾಥೇಶ್ವರ ಗುಹಾಲಯದಲ್ಲಿ ಪವಿತ್ರ ಗುಹಾಪ್ರವೇಶ, ಗುಹಾತೀರ್ಥ ಸ್ನಾನ ಗುರುವಾರ ಆರಂಭವಾಯಿತು
ಬಜಪೆ ಸಮೀಪದ ನೆಲ್ಲಿತೀರ್ಥ ಸೋಮನಾಥೇಶ್ವರ ಗುಹಾಲಯದಲ್ಲಿ ಪವಿತ್ರ ಗುಹಾಪ್ರವೇಶ, ಗುಹಾತೀರ್ಥ ಸ್ನಾನ ಗುರುವಾರ ಆರಂಭವಾಯಿತು   

ಬಜಪೆ: ನೆಲ್ಲಿತೀರ್ಥ ಸೋಮನಾಥೇಶ್ವರ ಗುಹಾಲಯದಲ್ಲಿ ಪವಿತ್ರ ಗುಹಾಪ್ರವೇಶ, ಗುಹಾತೀರ್ಥ ಸ್ನಾನ ಗುರುವಾರ ಆರಂಭವಾಯಿತು.

ತುಲಾ ಸಂಕ್ರಮಣದ ಸಂದರ್ಭ ಧಾರ್ಮಿಕ ಹಾಗೂ ಸಾಂಪ್ರದಾಯಿಕ ವಿಧಿಗಳೊಂದಿಗೆ ಕ್ಷೇತ್ರದ ತಂತ್ರಿ ಬಗ್ಗಮಜಲು ಸುಬ್ರಹ್ಮಣ್ಯ ತಂತ್ರಿ ಅವರ ನೇತೃತ್ವದಲ್ಲಿ ಮಧ್ವಾಚಾರ್ಯ ಸಂಸ್ಥಾನ ಚಿತ್ರಾಪುರ ಮಠದ ವಿದ್ಯೇಂದ್ರತೀರ್ಥ ಸ್ವಾಮೀಜಿ ದೀಪ ಬೆಳಗಿಸಿದರು. ಸೋಮನಾಥೇಶ್ವರ, ಮಹಾಗಣಪತಿ ದೇವರು ಹಾಗೂ ಜಾಬಾಲಿ ಮಹರ್ಷಿ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಕಟೀಲು ದೇವಳದ ಪ್ರಧಾನ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ, ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಕಿನ್ನಿಗೋಳಿ ಯುಗಪುರುಷದ ಭುವನಾಭಿರಾಮ ಉಡುಪ, ವಸಂತ ಭಟ್ ನೆಲ್ಲಿತೀರ್ಥ, ದೇಗುಲದ ಅರ್ಚಕ ಗಣಪತಿ ಭಟ್, ಅನಂತಕೃಷ್ಣ ಅಡಿಗ ಪುತ್ತಿಗೆ, ಎನ್.ವಿ.ವೆಂಕಟರಾಜ ಭಟ್, ಎನ್.ವಿ.ಜಿ.ಕೆ.ಭಟ್, ಪ್ರಸನ್ನ ಭಟ್ ನೆಲ್ಲಿತೀರ್ಥ, ಆನಂದ ಕಾವ ಸಾಂತ್ರಬೈಲು, ಕೃಷ್ಣಪ್ಪ ಪೂಜಾರಿ, ಸುಂದರ ಪೂಜಾರಿ, ಹನುಮಂತ ಕಾಮತ್ ಭಾಹವಹಿಸಿದ್ದರು.

ADVERTISEMENT

ಕ್ಷೇತ್ರದ ನಾಗಪ್ಪ ಕೆರೆಯಲ್ಲಿ ಮಿಂದು ಕ್ಷೇತ್ರದ ತಂತ್ರಿ ಅವರ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆಯೊಂದಿಗೆ ಗುಹಾಪ್ರವೇಶ ಆರಂಭ ಮಾಡಲಾಯಿತು.

ಅ.17ರ ತುಲಾ ಸಂಕ್ರಮಣದಂದು ಪ್ರಾರಂಭಗೊಂಡ ಗುಹಾಪ್ರವೇಶ - ಗುಹಾ ತೀರ್ಥ ಸ್ನಾನ ಏಪ್ರಿಲ್‌ ತಿಂಗಳ ಮೇಷ ಸಂಕ್ರಮಣದವರೆಗೂ ಪ್ರತಿದಿನ ಬೆಳಿಗ್ಗೆ 7 ರಿಂದ ಮಧ್ಯಾಹ್ನ 1 ಗಂಟೆಯವರೆಗೂ ನಡೆಯಲಿದೆ. ಹುಣ್ಣಿಮೆ ಸಂದರ್ಭ ಹುಣ್ಣಿಮೆ ತೀರ್ಥ ಸ್ನಾನ ಇಲ್ಲಿನ ವಿಶೇಷ.

ಬಜಪೆ ಸಮೀಪದ ನೆಲ್ಲಿತೀರ್ಥ ಸೋಮನಾಥೇಶ್ವರ ಗುಹಾಲಯದಲ್ಲಿ ಪವಿತ್ರ ಗುಹಾಪ್ರವೇಶ ಗುಹಾತೀರ್ಥ ಸ್ನಾನ ಗುರುವಾರ ಆರಂಭವಾಯಿತು
ಬಜಪೆ ಸಮೀಪದ ನೆಲ್ಲಿತೀರ್ಥ ಸೋಮನಾಥೇಶ್ವರ ಗುಹಾಲಯದಲ್ಲಿ ಪವಿತ್ರ ಗುಹಾಪ್ರವೇಶ ಗುಹಾತೀರ್ಥ ಸ್ನಾನ ಗುರುವಾರ ಆರಂಭವಾಯಿತು
ಬಜಪೆ ಸಮೀಪದ ನೆಲ್ಲಿತೀರ್ಥ ಸೋಮನಾಥೇಶ್ವರ ಗುಹಾಲಯದಲ್ಲಿ ಪವಿತ್ರ ಗುಹಾಪ್ರವೇಶ ಗುಹಾತೀರ್ಥ ಸ್ನಾನ ಗುರುವಾರ ಆರಂಭವಾಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.