ADVERTISEMENT

ಎನ್‌ಐಟಿಕೆಯಲ್ಲಿ ಇ-ಟ್ರೈಕ್ ವಿದ್ಯುತ್ ಚಾಲಿತ ವಾಹನ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2022, 14:51 IST
Last Updated 15 ಆಗಸ್ಟ್ 2022, 14:51 IST
ಎನ್‌ಐಟಿಕೆಯಲ್ಲಿ ಇ– ಟ್ರೈಕ್ ವಿದ್ಯುತ್ ಚಾಲಿತ ವಾಹನಕ್ಕೆ ನಿರ್ದೇಶಕ ಪ್ರೊ. ಉದಯಕುಮಾರ್ ಯರಗಟ್ಟಿ ಚಾಲನೆ ನೀಡಿದರು.
ಎನ್‌ಐಟಿಕೆಯಲ್ಲಿ ಇ– ಟ್ರೈಕ್ ವಿದ್ಯುತ್ ಚಾಲಿತ ವಾಹನಕ್ಕೆ ನಿರ್ದೇಶಕ ಪ್ರೊ. ಉದಯಕುಮಾರ್ ಯರಗಟ್ಟಿ ಚಾಲನೆ ನೀಡಿದರು.   

ಮಂಗಳೂರು: ಸ್ವಾತಂತ್ರ್ಯೋತ್ಸವದ ಅಂಗವಾಗಿ ಸುರತ್ಕಲ್ ಎನ್‌ಐಟಿಕೆಯಲ್ಲಿ ನಿರ್ದೇಶಕ ಪ್ರೊ. ಉದಯಕುಮಾರ್ ಆರ್. ಯರಗಟ್ಟಿ ಧ್ವಜಾರೋಹಣ ನೆರವೇರಿಸಿದರು.

ಎನ್‌ಸಿಸಿ ಕೆಡೆಟ್‌ಗಳು, ಅಧಿಕಾರಿಗಳು, ಭದ್ರತಾ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.

ವಿದ್‌ ಯುಗ್ 7.1 ಇ-ಟ್ರೈಕ್ ವಿದ್ಯುತ್ ಚಾಲಿತ ವಾಹನವನ್ನು ಪ್ರೊ. ಉದಯಕುಮಾರ್ ಯರಗಟ್ಟಿ ಉದ್ಘಾಟಿಸಿದರು. 1981ನೇ ಬ್ಯಾಚ್‌ನ ಹಳೆಯ ವಿದ್ಯಾರ್ಥಿಗಳ ಪ್ರಾಯೋಜಕತ್ವದಲ್ಲಿ ಕ್ಯಾಂಪಸ್ ವೇಸ್ಟ್ ಟು ಎನರ್ಜಿ ಪ್ರಾಜೆಕ್ಟ್ (ಸಿಡಬ್ಲ್ಯೂಇಪಿ) ಅಡಿಯಲ್ಲಿ ಎನ್‌ಐಟಿಕೆಯ ಸೆಂಟರ್ ಫಾರ್ ಸಿಸ್ಟಮ್ ಡಿಸೈನ್, ಎನ್ಐಟಿಕೆ ವಿನ್ಯಾಸಗೊಳಿಸಿದ ವಿದ್ಯುತ್ ಚಾಲಿತ ವಾಹನ ಇದಾಗಿದೆ. ಎನ್ಐಟಿಕೆ ಸಿಬ್ಬಂದಿ ವಸತಿಗೃಹ, ಸಿಬ್ಬಂದಿ ವಸತಿಗೃಹ ಮತ್ತು ಹಾಸ್ಟೆಲ್‌ಗಳಿಂದ ಬೇರ್ಪಡಿಸಿದ ಸಾವಯವ ತ್ಯಾಜ್ಯವನ್ನು ಸಂಗ್ರಹಿಸಲು ಹಾಗು ಸಾಗಿಸಲು ಈ ವಾಹನವನ್ನು ವಿನ್ಯಾಸಗೊಳಿಸಲಾಗಿದೆ. ಈ ವಾಹನವು ಲಿಥಿಯಂ -ಅಯಾನ್ ಬ್ಯಾಟರಿಯಲ್ಲಿ ಕಂಟ್ರೋಲರ್‌ನೊಂದಿಗೆ ಚಲಿಸುತ್ತದೆ. ಒಮ್ಮೆ ಬ್ಯಾಟರಿ ಸಂಪೂರ್ಣವಾಗಿ ಚಾರ್ಜ್ ಆದರೆ, ಕ್ಯಾಂಪಸ್‌ನಲ್ಲಿ 60-70 ಕಿ.ಮೀ.ವರೆಗೆ ಓಡಿಸಬಹುದಾಗಿದೆ.

ADVERTISEMENT

ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಆ.13ರಿಂದ 15ರವರೆಗೆ ಭಾಷಣ ಸ್ಪರ್ಧೆ, ವಿಡಿಯೊ, ಚಿತ್ರಕಲೆ ಸ್ಪರ್ಧೆ, ಧ್ವಜ ಮೆರವಣಿಗೆ, ಸೈಕ್ಲಥಾನ್ ಮೊದಲಾದ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.