ಮಂಗಳೂರು: ಬಂದರು ಮತ್ತು ಸರಕು ಸಾಗಣೆಯನ್ನು ವ್ಯವಸ್ಥಿತವಾಗಿ ಕಾರ್ಯರೂಪಗೊಳಿಸಿದ್ದಕ್ಕಾಗಿ ನವ ಮಂಗಳೂರು ಬಂದರು ಪ್ರಾಧಿಕಾರಕ್ಕೆ (ಎನ್‌ಎಂಪಿಎ) ಎರಡು ರಾಷ್ಟ್ರೀಯ ಪ್ರಶಸ್ತಿಗಳು ದೊರೆತಿವೆ.
ಜಾಗತಿಕ ಮಾನವ ಸಂಪನ್ಮೂಲ ಅಭಿವೃದ್ಧಿ ಕಾಂಗ್ರೆಸ್ (ಎಚ್‌ಆರ್‌ಡಿ), ಟ್ರಾನ್ಸ್‌ಫಾರ್ಮನ್ಸ್ ಫೋರಂ ಗುರುವಾರ ಬೆಂಗಳೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎನ್‌ಎಂಪಿಎ ಅಧ್ಯಕ್ಷ ಎ.ವಿ.ರಮಣ ಅವರು ಬಂದರು ಪರವಾಗಿ ‘ವರ್ಷದ ಪ್ರಮುಖ ಬಂದರು’ ಪ್ರಶಸ್ತಿ ಹಾಗೂ ವೈಯಕ್ತಿಕವಾಗಿ ‘ವರ್ಷದ ಸಿಇಒ’ ಪ್ರಶಸ್ತಿ ಸ್ವೀಕರಿಸಿದರು ಎಂದು ಎನ್ಎಂಪಿಎ ಪ್ರಕಟಣೆ ತಿಳಿಸಿದೆ.
‘ಎನ್‌ಎಂಪಿಎ 2019ರಲ್ಲಿ ತೆರಿಗೆ ನಂತರ ₹110 ಕೋಟಿ ಲಾಭ ಗಳಿಸಿತ್ತು. 2025ರಲ್ಲಿ ₹550 ಕೋಟಿ ಲಾಭ ಗಳಿಸಿದೆ. ತಂತ್ರಜ್ಞಾನ ಆಧಾರಿತ, ಯಾಂತ್ರೀಕೃತ ಕಾರ್ಯಾಚರಣೆಯಲ್ಲಿ ಸಂಸ್ಥೆ ಮುಂಚೂಣಿಯಲ್ಲಿದೆ. ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುವ ನೌಕರರ, ಸ್ಟೀವರ್‌ಗಳು, ಸಹಭಾಗಿತ್ವದ ಯೋಜನೆಗಳ ಪ್ರಮುಖರು ಎಲ್ಲರ ಸಹಕಾರದಿಂದ ಈ ಸಾಧನೆ ಸಾಧ್ಯವಾಗಿದೆ’ ಎಂದು ಎ.ವಿ. ರಮಣ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.