
ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸುಬ್ರಹ್ಮಣ್ಯ ಪೂರ್ಣಪ್ರಜ್ಞ ವಿದ್ಯಾಪೀಠದ ಶ್ರೀಮದ್ ಬ್ರಹ್ಮಸೂತ್ರ–ಅನುವ್ಯಾಖ್ಯಾನ- ನ್ಯಾಯಸುಧಾಮಂಗಳ ಮಹೋತ್ಸವದಲ್ಲಿ ಸುಧಾ ವಿದ್ಯಾರ್ಥಿಗಳಿಂದ ಶ್ರೀಮನ್ಯಾಯಸುಧಾ ಅನುವಾದ ಕಾರ್ಯಕ್ರಮ, ನಾಮ ಸಂಕೀರ್ತನೆ ನಡೆಯಿತು.
ತತ್ವಸುಧಾಸಮೀಕ್ಷಾ ಗ್ರಂಥದ ಆಧಾರದಲ್ಲಿ ವಾಕ್ಯಾರ್ಥಗೋಷ್ಠಿ ನಡೆಯಿತು. ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಶ್ರೀವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ, ಭೀಮನಕಟ್ಟೆ ಮಠದ ರಘುವರೇಂದ್ರತೀರ್ಥ ಸ್ವಾಮೀಜಿ, ಅದಮಾರು ಈಶಪ್ರಿಯತೀರ್ಥ ಸ್ವಾಮೀಜಿ ಭಾಗವಹಿಸಿದ್ದರು.
ಅಧ್ಯಕ್ಷತೆಯನ್ನು ಪ್ರೊ.ಅದ್ಯಪಾಡಿ ಹರಿದಾಸ ಭಟ್ಟ ಆಚಾರ್ಯ ವಹಿಸಿದ್ದರು.
ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ವಡೆಯರ್ ಭಾಗವಹಿಸಿದ್ದರು. ವಿವಿಧ ವಿಷಯಗಳ ಕುರಿತು ವಿಚಾರಗೋಷ್ಠಿ ನಡೆಯಿತು.
ಪೇಜಾವರ ಮಠದ ವತಿಯಿಂದ ತಿರುಮಲ ಕುಲಕರ್ಣಿ ಆಚಾರ್ಯ ಅವರಿಗೆ ಶ್ರೀವಿಜಯಧ್ವಜ ಪ್ರಶಸ್ತಿ, ಹೆಬ್ರಿ ಪದ್ಮನಾಭ ಆಚಾರ್ಯ ಅವರಿಗೆ ವಿಶ್ವೇಶ್ ಕೃಪಾ ಪಾತ್ರ ಪ್ರಶಸ್ತಿ, ಮುರಳಿ ಕಡೆಕಾರು ಅವರಿಗೆ ಶ್ರೀರಾಮ ವಿಟ್ಠಲಾನುಗ್ರಹ ಪ್ರಶಸ್ತಿ, ಸುಬ್ರಹ್ಮಣ್ಯ ಮಠದ ವತಿಯಿಂದ ಮಹಾಮಹೋಪಾಧ್ಯಾಯ ಎ.ಹರಿದಾಸ ಭಟ್ಟ ಆಚಾರ್ಯ ಅವರಿಗೆ ವಿಷ್ಣುತೀರ್ಥ ಪ್ರಶಸ್ತಿ, ಪ್ರೊ.ಆಚಾರ್ಯ ವೀರನಾರಾಯಣ ಪಾಂಡುರಂಗಿ ಅವರಿಗೆ ಶ್ರೀಅನಿರುದ್ಧತೀರ್ಥ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸಗ್ರಿ ಆನಂದ ತೀರ್ಥ ಅವರು ಉಪನ್ಯಾಸ ನೀಡಿದರು. ವಿದ್ವಾನ್ ಕಿರಣ ಆಚಾರ್ಯ ನಿರ್ವಹಿಸಿದರು. ಬಳಿಕ ದಾಸವಾಣಿ ಸಂಗೀತ ಕಾರ್ಯಕ್ರಮ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.