ADVERTISEMENT

ಅಗರಿ ರಘುರಾಮ ಭಾಗವತ

ನಿಧನ

​ಪ್ರಜಾವಾಣಿ ವಾರ್ತೆ
Published 27 ಜನವರಿ 2019, 19:33 IST
Last Updated 27 ಜನವರಿ 2019, 19:33 IST
.
.   

ಮಂಗಳೂರು: ತೆಂಕುತಿಟ್ಟು ಯಕ್ಷಗಾನದ ಹೆಸರಾಂತ ಭಾಗವತ ಅಗರಿ ರಘುರಾಮ ಭಾಗವತರು (84) ಅಲ್ಪ ಕಾಲದ ಅಸೌಖ್ಯದಿಂದ ನಗರದ
ಎ.ಜೆ.ಆಸ್ಪತ್ರೆಯಲ್ಲಿಭಾನುವಾರ ನಿಧನರಾದರು. ಅವರಿಗೆ ಪುತ್ರಿ, ಮೂವರು ಪುತ್ರರು ಇದ್ದಾರೆ.

ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಅಂದಿನ ಸುರತ್ಕಲ್‌ ಮೇಳದಲ್ಲಿ ಭಾಗವತರಾಗಿದ್ದ ರಘುರಾಮ ಅವರು, ಮೇಳದ ಎಲ್ಲ ಕೆಲಸಗಳನ್ನು
ನಿರ್ವಹಿಸುವಲ್ಲಿ ಸಮರ್ಥರಾಗಿದ್ದರು.ಬಿ.ಎ. ಶಿಕ್ಷಣ ಪಡೆದು ಶಿಕ್ಷಣ ಇಲಾಖೆಯಲ್ಲಿ ಕೆಲಸಕ್ಕಿದ್ದರೂ, ಅವರನ್ನು ಸೆಳೆದುದು ಯಕ್ಷಗಾನ. ಕುರಿಯ ಶೈಲಿ, ಬಲಿಪ ಶೈಲಿ, ಮಂಡೆಚ್ಚ ಶೈಲಿ ಮಾದರಿಯಲ್ಲಿ ‘ಅಗರಿ ಶೈಲಿ’ಯನ್ನು ಅವರ ತಂದೆ ಶ್ರೀನಿವಾಸ ಭಾಗವತರು ಆರಂಭಿಸಿದ್ದರು.

ರಘುರಾಮ ಭಾಗವತರು ಈ ಶೈಲಿಯ ಜನಪ್ರಿಯ ಭಾಗವತರಾಗಿ ಗುರುತಿಸಿಕೊಂಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.