ವಂಚನೆ–ಪ್ರಾತಿನಿಧಿಕ ಚಿತ್ರ
ಮಂಗಳೂರು: ಸ್ಟಾಕ್ ಟ್ರೇಡಿಂಗ್‌ನಲ್ಲಿ ಹೂಡಿಕೆ ಮಾಡುವ ನೆಪದಲ್ಲಿ ಆನ್‌ಲೈನ್‌ನಲ್ಲಿ ₹ 46.50 ಲಕ್ಷ ಹಣ ವರ್ಗಾಯಿಸಿ ವಂಚನೆಗೆ ಒಳಗಾದ ಬಗ್ಗೆ ಸಂತ್ರಸ್ತ ವ್ಯಕ್ತಿ ದೂರು ನೀಡಿದ್ದು, ಇಲ್ಲಿನ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ನನ್ನ ಮೊಬೈಲ್ ನಂಬರ್ ಗೆ ವಾಟ್ಸ್ ಆ್ಯಪ್‌ಗೆ ಈಚೆಗೆ ಸಂದೇಶ ಬಂದಿತ್ತು. ಮೇಫೀಲ್ಡ್ ಟ್ರೇಡಿಂಗ್ ಎಂಬ ಗ್ರೂಪ್‌ಗೆ ಯಾರೋ ಅಪರಿಚಿತರು ನನ್ನ ಮೊಬೈಲ್ ನಂಬರ್ ಸೇರಿಸಿದ್ದರು. ಮೇಫೀಲ್ಡ್ ಟ್ರೇಡಿಂಗ್ ಮೂಲಕ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಹೆಚ್ಚು ಲಾಭ ಗಳಿಸಬಹುದು ಎಂದು ತಿಳಿಸಿದ್ದರು.
ಮೇ 7ರಂದು ವಾಟ್ಸ್ ಆ್ಯಪ್ ಕರೆ ಮಾಡಿದ ವ್ಯಕ್ತಿ ತನ್ನನ್ನು ಮೇಫೀಲ್ಡ್ ಟ್ರೇಡಿಂಗ್ ಇನ್‌ವೆಸ್ಟ್‌ಮೆಂಟ್‌ನ ವ್ಯವಸ್ಥಾಪಕ ಹ್ಯಾರಿಸ್ ಎಂದು ಪರಿಚಯಿಸಿಕೊಂಡಿದ್ದ. ಆತ ಕಳುಹಿಸಿದ ಕೊಂಡಿ ಬಳಸಿ ನಾನು ಹಂತ ಹಂತವಾಗಿ ಒಟ್ಟು ₹ 46.50 ಲಕ್ಷ ಹೂಡಿಕೆ ಮಾಡಿದ್ದೆ. ಹಣ ಹಿಂಪಡೆಯಲು ಯತ್ನಿಸಿದಾಗ ಸಾಧ್ಯವಾಗಲಿಲ್ಲ. ಈ ಬಗ್ಗೆ ಹ್ಯಾರಿಸ್‌ಗೆ ಸಂದೇಶ ಕಳುಹಿಸಿದಾಗ ಆತ ತೆರಿಗೆ ಕಟ್ಟುವಂತೆ ಹೇಳಿದ. ಆಗ ಮೋಸ ಹೋಗಿರುವುದು ಖಚಿತವಾಯಿತು‘ ಎಂದು ಸಂತ್ರಸ್ತ ವ್ಯಕ್ತ ದೂರಿನಲ್ಲಿ ತಿಳಿಸಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.