ADVERTISEMENT

ಮಂಗಳೂರು | ಆನ್‌ಲೈನ್‌ನಲ್ಲಿ ಚಿನ್ನ ಖರೀದಿ ನೆಪ: ₹ 4.77 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2025, 7:06 IST
Last Updated 16 ಆಗಸ್ಟ್ 2025, 7:06 IST
<div class="paragraphs"><p> ವಂಚನೆ</p></div>

ವಂಚನೆ

   

ಮಂಗಳೂರು: ಆನ್‌ಲೈನ್‌ನಲ್ಲಿ ಚಿನ್ನ ಖರೀದಿಸಿ ವ್ಯವಹಾರ ನಡೆಸುವ ನೆಪದಲ್ಲಿ ₹ 4.77 ಲಕ್ಷ ಹಣ ಪಡೆದು ವಂಚಿಸಿದ ಬಗ್ಗೆ ಸಂತ್ರಸ್ತ ವ್ಯಕ್ತಿ ದೂರು ನೀಡಿದ್ದು, ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಆನ್‌ಲೈನ್‌ನಲ್ಲಿ ಚಿನ್ನ ಖರೀದಿಸಿ ವ್ಯವಹಾರ ನಡೆಸುವ ಕುರಿತು ನನ್ನ ಮೊಬೈಲ್‌ಗೆ ಜೂನ್ 10ರಂದು ಸಂದೇಶ ಬಂದಿತ್ತು.  ನನ್ನನ್ನು ವಾಟ್ಸ್‌ ಆ್ಯಪ್ ಗ್ರೂಪ್ ಒಂದಕ್ಕೆ (ಎ24 ಪ್ರೀಮಿಯಂ ವಿಐಪಿ ಸ್ಟಾಕ್ ಶೇರಿಂಗ್ ಕ್ಲಬ್‌) ಸೇರಿಸಿದ್ದರು. ಆರಂಭದಲ್ಲಿ ಸಣ್ಣ ಮೊತ್ತ ಹೂಡಿಕೆ ಮಾಡಿದ್ದು, ಲಾಭಾಂಶ ನೀಡಿದ್ದರು. ಬಳಿಕ ಜೂನ್ 13ರಿಂದ ಜುಲೈ 7ರವರೆಗೆ ಹಂತ ಹಂತವಾಗಿ ₹1.40 ಲಕ್ಷ ಹೂಡಿಕೆ ಮಾಡಿದ್ದೆ. ಅದರ ಲಾಭಾಂಶ ಪಡೆಯಲು ₹ 3.37 ಲಕ್ಷ ನೀಡಬೇಕೆಂದು ತಿಳಿಸಿದ್ದರು. ಆ ಮೊತ್ತವನ್ನೂ ಕಳುಹಿಸಿದ ಬಳಿಕವೂ ಲಾಭಾಂಶದೊಂದಿಗೆ ಹಣ ಮರಳಿಸಲಿಲ್ಲ. ಆಗ ಸಂದೇಹ ಬಂದು ಪರಿಶೀಲಿಸಿದಾಗ ಮೋಸ ಹೋಗಿದ್ದು ತಿಳಿಯಿತು’ ಎಂದು ಸಂತ್ರಸ್ತ ವ್ಯಕ್ತಿ ದೂರಿನಲ್ಲಿ ತಿಳಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.