ADVERTISEMENT

ತುಂಡಾದ ಯುವಕನ ಕಾಲು ಮರುಜೋಡಣೆ

ಫಾ.ಮುಲ್ಲರ್‌ ಆಸ್ಪತ್ರೆ ವೈದ್ಯರ ಯಶಸ್ವಿ ಶಸ್ತ್ರಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 6 ಮೇ 2020, 10:22 IST
Last Updated 6 ಮೇ 2020, 10:22 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮಂಗಳೂರು: ಅಪಘಾತದಲ್ಲಿ ತುಂಡಾದ 22 ವರ್ಷದ ಯುವಕನ ಕಾಲನ್ನು ನಗರದ ಫಾದರ್ ಮುಲ್ಲರ್‌ ಆಸ್ಪತ್ರೆಯ ವೈದ್ಯರ ತಂಡ ಕ್ಷಿಷ್ಟಕರ ಶಸ್ತ್ರಚಿಕಿತ್ಸೆಯ ಮೂಲಕ ಯಶಸ್ವಿಯಾಗಿ ಮರು ಜೋಡಣೆ ಮಾಡಿದ್ದಾರೆ.

ಅಪಘಾತದಲ್ಲಿ ಎಡ ಮೊಣಕಾಲಿನ ಕೆಳಭಾಗ ಕತ್ತರಿಸಿ ಪ್ರಾಣಾಪಾಯದಲ್ಲಿದ್ದ ಸುಮಾರು 22 ವರ್ಷದ ಯುವಕನಿಗೆ ಅರು ಗಂಟೆಗಳ ತುರ್ತು ಶಸ್ತ್ರಚಿಕಿತ್ಸೆ ನಡೆಸಿರುವ ವೈದ್ಯರು, ತುಂಡಾದ ಭಾಗವನ್ನು ಮರು ಜೋಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಲಾಕ್‌ಡೌನ್ ಹೇರಿಕೆಯಾದ ದಿನದ ಹಿಂದಿನ ದಿನ ನಗರದ ಪಂಪ್‌ವೆಲ್ ಜಂಕ್ಷನ್‌ನಲ್ಲಿ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡಿದ್ದ ಯುವಕನನ್ನು ಆಟೊ ಚಾಲಕರು ತುಂಡಾದ ಕಾಲಿನೊಂದಿಗೆ ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದರು. ಮೊಣಕಾಲಿನ ಕೆಳಭಾಗದಲ್ಲಿ ತುಂಡಾಗಿದ್ದ ಕಾಲುಗಳನ್ನು ಜೋಡಿಸುವುದು ಅತ್ಯಂತ ಕ್ಲಿಷ್ಟಕರವಾಗಿತ್ತು. ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮೈಕ್ರೋ ಸರ್ಜರಿ ವಿಭಾಗದ ತಜ್ಞ ಡಾ.ಲತೀಶ್ ಮತ್ತು ಡಾ.ವಾಸುದೇವ ರೆಡ್ಡಿ, ಡಾ.ಅನಂತ್ ಸೋಮಯಾಜಿ ನೇತೃತ್ವದ ವೈದ್ಯರು ತಂಡರೊಂದಿಗೆ ಶಸ್ತ್ರಚಿಕಿತ್ಸೆ ನಡೆಸಿದರು.

ADVERTISEMENT

ಯುವಕನನ್ನು ತುಂಡಾದ ಕಾಲಿನೊಂದಿಗೆ ತ್ವರಿತವಾಗಿ ಅಸ್ಪತ್ರೆಗೆ ದಾಖಲಿಸಿದ ಆಟೊ ರಿಕ್ಷಾ ಚಾಲಕನ ಸಮಯಪ್ರಜ್ಞೆಯನ್ನು ಆಸ್ಪತ್ರೆ ವೈದ್ಯಾಧಿಕಾರಿಗಳ ತಂಡ ಶ್ಲಾಘಿಸಿದೆ. ಸದ್ಯ ಶಸ್ತ್ರ ಚಿಕಿತ್ಸೆಗೊಳಗಾಗಿರುವ ಯುವಕ ಚೇತರಿಸಿಕೊಂಡಿದ್ದು. ಕಳೆದ ವಾರ ಮೊಣಕಾಲು ಸಮತಟ್ಟುಗೊಳಿಸುವ ಪ್ರಕ್ರಿಯೆ ನಡೆಸಲಾಗಿದೆ. ಎರಡು ದಿನಗಳಲ್ಲಿ ಯುವಕ ಆಸ್ಪತ್ರೆಯಿಂದ ಬಿಡುಗಡೆ ಆಗಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.