
ಮೂಲ್ಕಿ: ಕ್ರೀಡೆಯಿಂದ ಯುವಕರು ಸಂಘಟನಾತ್ಮಕವಾಗಿ ಬೆಳೆಯಬೇಕು. ನಮ್ಮ ನಡುವಿನ ಪರಸ್ಪರ ವೈಷಮ್ಯವನ್ನು ದೂರಮಾಡಿ ಭವ್ಯ ಭಾರತದ ಕನಸನ್ನು ನನಸು ಮಾಡುವ ಶಕ್ತಿ ಯುವ ಸಮುದಾಯಕ್ಕೆ ಇದೆ. ಕ್ರೀಡೆಯ ಮೂಲಕ ಸಮಾಜ ಸೇವೆಯನ್ನು ಮಾಡಿ ಎಂದು ಕೆಪಿಸಿಸಿ ಉಪಾಧ್ಯಕ್ಷ ಬಿ.ರಮಾನಾಥ ರೈ ಹೇಳಿದರು.
ಇಲ್ಲಿನ ವಿಜಯಾ ಕಾಲೇಜಿನ ಕ್ರೀಡಾಂಗಣದಲ್ಲಿ ಈಗಲ್ ಮರೈನ್ ಸಹಯೋಗದಲ್ಲಿ ಮಿಥುನ್ ರೈ ಟ್ರೋಫಿ–2025ರ ರಾಷ್ಟ್ರ ಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಟೂರ್ನಿಗೆ ಚಾಲನೆ ನೀಡಿ ಮಾತನಾಡಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಟೂರ್ನಿಯ ಕ್ರೀಡಾಳುಗಳಿಗೆ ಧ್ವಜ ನೀಡಿ, ಜಿಲ್ಲೆಯಲ್ಲಿ ಸುಸಜ್ಜಿತ ಕ್ರೀಡಾಂಗಣದ ಕೊರತೆ ಉಂಟಾಗಿದ್ದು, ಶ್ರೇಷ್ಠ ಕ್ರೀಡಾಪಟುಗಳು ಬೆಂಗಳೂರು ಅನೇಕ ರಾಜ್ಯದ ಕಡೆ ವಲಸೆ ಹೋಗುತ್ತಿದ್ದಾರೆ. ಶೀಘ್ರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಯತ್ನಿಸಲಾಗುವುದು ಎಂದರು.
ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮಾಜಿ ಸಚಿವ ಅಭಯಚಂದ್ರ ಜೈನ್, ಬ್ಲಾಕ್ ಅಧ್ಯಕ್ಷ ಮೋಹನ್ ಕೋಟ್ಯಾನ್, ರಾಜಶೇಖರ ಕೋಟ್ಯಾನ್, ಮಂಜುನಾಥ್ ಬಿ. ಎಸ್., ಮಹಾಬಲ ಮಾರ್ಲ, ಚಿತ್ತರಂಜನ್ ಶೆಟ್ಟಿ, ಕೆಪಿಸಿಸಿಯ ವಸಂತ್ ಬೆರ್ನಾಡ್, ಅಶೋಕ್ ಪೂಜಾರ್, ಧರ್ಮಾನಂದ ಶೆಟ್ಟಿಗಾರ್, ಪ್ರವೀಣ್ ಜೈನ್, ಗೌತಮ್ ಶೆಟ್ಟಿ, ಶರತ್ ಶೆಟ್ಟಿ ಪಡುಬಿದ್ರೆ, ರೂಪೇಶ್ ಶೆಟ್ಟಿ, ಸುಭಾಷ್ ಕಾಮತ್, ಡಾ.ಚಂದ್ರಶೇಖರ್ ಬಲೆಪು, ಯೋಗೀಶ್ ಕೋಟ್ಯಾನ್, ಮಂಜುನಾಥ ಕಂಬಾರ, ಧನಂಜಯ ಮಟ್ಟು, ಗೋಪಿನಾಥ ಪಡಂಗ, ರಕ್ಷಿತ್ ಕೊಳಚಿ ಕಂಬಳ, ಈಗಲ್ ಮರೈನ್‌ನ ಕಾರ್ತಿಕ್ ಸಾಲ್ಯಾನ್, ಶರತ್ ಕಾರ್ನಾಡ್, ಜನಾರ್ಧನ್ ಬಂಗೇರ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.