ಬಂಟ್ವಾಳ: ಇಲ್ಲಿನ ಪಲ್ಲಮಜಲು ಶ್ರೀರಾಮ ಭಕ್ತಾಂಜನೇಯ ಭಜನಾ ಮಂದಿರದಲ್ಲಿ ಶ್ರೀ ಮಹಾಪವಮಾನ ಯಾಗ ಸಮಿತಿ ವತಿಯಿಂದ ಮಹಾ ಪವಮಾನ ಯಾಗ ಭಾನುವಾರ ಪೂರ್ಣಾಹುತಿಯೊಂದಿಗೆ ಸಮಾಪನಗೊಂಡಿತು.
ದೈವಜ್ಞ ಶಶಿಕುಮಾರ್ ಪಂಡಿತ್ ಮಾರ್ಗದರ್ಶನದಲ್ಲಿ ವಿನಾಯಕ ಕಾರಂತ ಅವರ ಪೌರೋಹಿತ್ಯದಲ್ಲಿ 108 ಪವಮಾನ ಪಾರಾಯಣ ಸಹಿತ ಮಹಾ ಪವಮಾನ ಯಾಗ, 108 ಲಕ್ಷ ಶ್ರೀರಾಮ ತಾರಕ ಜಪಯಜ್ಞ, ಶ್ರೀ ಆಂಜನೇಯ ದೇವರಿಗೆ ಸಹಸ್ರ ಕದಳಿ ಯಾಗ, ವಿಷ್ಣು ಸಹಸ್ರನಾಮ ಪಾರಾಯಣ ನಡೆಯಿತು. ಇದೇ ವೇಳೆ ಯಾಗದ ಮಹತ್ವದ ವಿಶ್ಲೇಷಣೆ ಮತ್ತು ಧನ್ಯೋತ್ಸವ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.
ಆರ್‌ಎಸ್‌ಎಸ್ ಪ್ರಾಂತ ಕಾರ್ಯವಾಹ ಪಿ.ಎಸ್.ಪ್ರಕಾಶ್ ಧಾರ್ಮಿಕ ಉಪನ್ಯಾಸ ನೀಡಿದರು.
ಕೊಂಡೆವೂರು ಯೋಗಾನಂದ ಸರಸ್ವತಿ ಸ್ವಾಮೀಜಿ, ಗುರುಪುರ ವಜ್ರದೇಹಿ ರಾಜಶೇಖರಾನಂದ ಸ್ವಾಮೀಜಿ, ಮಾಣಿಲ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿದರು.
ಶಾಸಕ ರಾಜೇಶ ನಾಯ್ಕ್ ಉಳಿಪಾಡಿ, ಸಂಸದ ಕ್ಯಾ.ಬ್ರಿಜೇಶ್ ಚೌಟ, ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ಬಿಜೆಪಿ ಕ್ಷೇತ್ರಾಧ್ಯಕ್ಷ ಆರ್.ಚೆನ್ನಪ್ಪ ಕೋಟ್ಯಾನ್, ಮಾಜಿ ಅಧ್ಯಕ್ಷ ದೇವಪ್ಪ ಪೂಜಾರಿ, ಉದ್ಯಮಿ ಅರೆಬೆಟ್ಟು ಸಂತೋಷ್ ಶೆಟ್ಟಿ ಭಾಗವಹಿಸಿದ್ದರು.
ಮಧ್ಯಾಹ್ನ ಬಳಿಕ ‘ಯಕ್ಷಗಾನ ವೈಭವ’ ಕಾರ್ಯಕ್ರಮ ನಡೆಯಿತು.
ಯಾಗ ಸಮಿತಿ ಅಧ್ಯಕ್ಷ ಸಂದೇಶ್ ಶೆಟ್ಟಿ ಅರೆಬೆಟ್ಟು, ಪ್ರಧಾನ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ, ಶ್ರೀರಾಮ ಭಕ್ತಾಂಜನೇಯ ಭಜನಾ ಮಂದಿರ ಗೌರವಾಧ್ಯಕ್ಷ ಪಿ.ಸೇಸಪ್ಪ ದಾಸಯ್ಯ, ಅಧ್ಯಕ್ಷ ಗಣೇಶದಾಸ್ ಕಾಮೇರಿಕೋಡಿ, ಪ್ರಧಾನ ಕಾರ್ಯದರ್ಶಿ ಸತೀಶ್ ಪಲ್ಲಮಜಲು, ಕೋಶಾಧಿಕಾರಿ ಮನೋಜ್ ಕುಮಾರ್, ಪ್ರಮುಖರಾದ ರಮೇಶ್ ಸುವರ್ಣ, ಸದಾಶಿವ ಪೂಜಾರಿ, ರಾಜೇಶ್ ಗೌಡ ಗೋಳಿನೆಲ, ವಿನೋದ ಭಾಸ್ಕರ, ಭವನ್, ನಿತೇಶ್, ದೀಕ್ಷಿತ, ಲೋಕನಾಥ, ಕರುಣಾಕರ, ಹರಿಪ್ರಸಾದ್ ಭಂಡಾರಿಬೆಟ್ಟು, ಅಶೋಕ, ಪ್ರಶಾಂತ್ ಕುಮಾರ್, ಶರತ್, ಅಕ್ಷಯ್, ದಿವಾಕರ ಕುಲಾಲ್, ರಾಮ ಕುಲಾಲ್, ಸುಕೇಶ್ ಗೋಳಿನೆಲ, ಚಿರಾಗ್, ದಿವ್ಯ ಪ್ರದೀಪ್, ಯಶಸ್ವಿನಿ, ಉಮೇಶ ಕುಲಾಲ್, ನಿವೇದಿತಾ, ಹೊನ್ನಮ್ಮ, ಆನಂದ ಗೌಡ, ರೇಣುಕಾ, ಹೇಮಾವತಿ ಲೋಕನಾಥ್, ನವಿರೇಶ್, ಕಮಲಾಕ್ಷಿ, ನವೀನ ಪಲ್ಲಮಜಲು, ಸುದೇಶ್ ಗೋಳಿನೆಲ, ಕಾರ್ತಿಕ್ ಪಲ್ಲಮಜಲು, ಮಾತೃ ಸಮಿತಿ ಅಧ್ಯಕ್ಷೆ ಸುಲೋಚನಾ ಜಿ.ಕೆ. ಭಟ್, ಸಂಚಾಲಕಿ ಜಯಶ್ರೀ ಕರ್ಕೇರ ಅಬ್ಬೆಟ್ಟು, ಕಾರ್ಯದರ್ಶಿ ಮಣಿಮಾಲ ಬಿ.ಶೆಟ್ಟಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.