ADVERTISEMENT

ಪ್ರಯಾಣಿಕನಿಗೆ ಚಿಕಿತ್ಸೆ: ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ ತುರ್ತು ಭೂಸ್ಪರ್ಶ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2025, 20:01 IST
Last Updated 2 ಡಿಸೆಂಬರ್ 2025, 20:01 IST
ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ
ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ   

ಮಂಗಳೂರು: ಪ್ರಯಾಣಿಕರೊಬ್ಬರಿಗೆ ವೈದ್ಯಕೀಯ ತುರ್ತು ಎದುರಾದ್ದರಿಂದ ರಿಯಾದ್‌ನಿಂದ ತಿರುವನಂತಪುರಕ್ಕೆ ತೆರಳುತ್ತಿದ್ದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನವನ್ನು ಸೋಮವಾರ ತಡರಾತ್ರಿ ಇಲ್ಲಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತಾಗಿ ಇಳಿಸಲಾಯಿತು ಎಂದು ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ.

(ಐಎಕ್ಸ್‌ 522) ವಿಮಾನದಲ್ಲಿದ್ದ 30 ವರ್ಷದ ಪ್ರಯಾಣಿಕರೊಬ್ಬರಿಗೆ ವೈದ್ಯಕೀಯ ತುರ್ತು ಸಂದರ್ಭ ಎದುರಾಯಿತು.

ವಿಮಾನ ನಿಲ್ದಾಣದ ಕಾರ್ಯಾಚರಣೆ ನಿಯಂತ್ರಣ ಕೇಂದ್ರ ಎಲ್ಲ ವಿಭಾಗಗಳ ಸಮನ್ವಯದಲ್ಲಿ ವೈದ್ಯಕೀಯ ತಂಡ ಸಜ್ಜುಗೊಳಿಸಿ ವಿಮಾನದಲ್ಲೇ ರೋಗಿಗೆ ಚಿಕಿತ್ಸೆ ನೀಡಿ, ನಂತರ ಸ್ಥಳೀಯ ಆಸ್ಪತ್ರೆಗೆ ಸಾಗಿಸಲು ನೆರವಾಯಿತು. ನಂತರ ವಿಮಾನವು ಮಂಗಳವಾರ ಬೆಳಗಿನ ಜಾವ 2.05 ಗಂಟೆಗೆ ತಿರುವನಂತಪುರಂ ಕಡೆಗೆ ಹೊರಟಿತು. ತಕ್ಷಣದ ಕಾರ್ಯಾಚರಣೆ ಹಾಗೂ ನಿಲ್ದಾಣದ ಸಿಬ್ಬಂದಿಯ ಸಮನ್ವಯದಿಂದ ಇದು ಸಾಧ್ಯವಾಯಿತು ಎಂದು ವಕ್ತಾರರು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.