ADVERTISEMENT

ಮಗುವಿನ ಚಿಕಿತ್ಸೆಗೆ ಪೆನ್‌ ಮಾರುವ ಅಭಿಯಾನ: ₹30 ಸಾವಿರ ನೆರವು

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2026, 3:12 IST
Last Updated 18 ಫೆಬ್ರುವರಿ 2026, 3:12 IST
ಬೆಳ್ತಂಗಡಿ ಬಸ್ ನಿಲ್ದಾಣದ ಬಳಿ ಪೆನ್ ಮಾರುವ ಮೂಲಕ ರಾಜಕೇಸರಿ ಸಂಘಟನೆ ಸದಸ್ಯರು ಎಂಡೋಪೀಡಿತ ಮಗುವಿಗೆ ಆರ್ಥಿಕ ನೆರವು ಸಂಗ್ರಹಿಸಿದರು
ಬೆಳ್ತಂಗಡಿ ಬಸ್ ನಿಲ್ದಾಣದ ಬಳಿ ಪೆನ್ ಮಾರುವ ಮೂಲಕ ರಾಜಕೇಸರಿ ಸಂಘಟನೆ ಸದಸ್ಯರು ಎಂಡೋಪೀಡಿತ ಮಗುವಿಗೆ ಆರ್ಥಿಕ ನೆರವು ಸಂಗ್ರಹಿಸಿದರು   

ಬೆಳ್ತಂಗಡಿ: ‘ರಾಜಕೇಸರಿ ಸಂಘಟನೆಯ ಯುವಕರು ಪೆನ್ ಮಾರಾಟ ಮಾಡಿ ಪುಟ್ಟ ಮಗುವಿಗೆ ನೆರವು ನೀಡಲು ಮುಂದಾಗಿರುವುದು ಸಮಾಜಕ್ಕೆ ಮಾದರಿ. ಇಂಥ ಸಂಘಟನೆಗೆ ಎಲ್ಲರೂ ಕೈಜೋಡಿಸಿದಾಗ ನೆಮ್ಮದಿಯ ಸಮಾಜ ನಿರ್ಮಾಣವಾಗಲು ಸಾಧ್ಯ’ ಎಂದು ಅರ್ಜುನ್ ಭಂಡಾರ್ಕಾರ್ ಹೇಳಿದರು.

ಗರ್ಡಾಡಿ ನಿವಾಸಿ ಉಮಾವತಿ ಅವರ ಮಗು ಅನಾರೋಗ್ಯಕ್ಕೀಡಾಗಿದ್ದು, ಆರ್ಥಿಕ ನೆರವು ನೀಡಲು ರಾಜಕೇಸರಿ ಸಂಘಟನೆ ಮುಂದಾಗಿದೆ. ನೆರವು ಸಂಗ್ರಹ ಕಾರ್ಯಕ್ಕೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.

ಪತ್ರಕರ್ತ ದಾಮೋದರ ದೊಂಡೊಳೆ, ಬಳಂಜ ಶಿಕ್ಷಣ ಟ್ರಸ್ಟ್ ಅದ್ಯಕ್ಷ ಮನೋಹರ್ ಬಳಂಜ ಮಾತನಾಡಿದರು.

ADVERTISEMENT

ದಲಿತ ಮುಖಂಡ ಶೇಖರ್ ಲಾಯಿಲ, ರಾಜಕೇಸರಿ ಸೇವಾ ಟ್ರಸ್ಟ್ ಸ್ಥಾಪಕ ದೀಪಕ್ ಜಿ.ಬೆಳ್ತಂಗಡಿ , ಟ್ರಸ್ಟ್ ಪದಾಧಿಕಾರಿಗಳಾದ ಸಂದೀಪ್ ಬೆಳ್ತಂಗಡಿ, ಜಗದೀಶ್ ಲಾಯಿಲ, ಶರತ್ ಕೆ.ಎಸ್., ಪ್ರಶಾಂತ್ ಗುರುವಾಯನಕೆರೆ, ಸಂಪತ್, ಶರತ್ ಕರಾಯ, ವಿನೋದ್ ಲಾಯಿಲ, ರಾಜೇಶ್ ರೇಷ್ಮೆ ರೋಡ್, ಸಂದೇಶ್, ಲೋಹಿತ್ ಬಂದಾರು, ಸೌಮ್ಯ, ಲೋಕೇಶ್ ಶಬರಬೈಲು, ಪ್ರವೀಣ್ ಆಚಾರ್ಯ, ದೇವರಾಜ್ ಪೂಜಾರಿ, ಶಶಿಕಾಂತ್ ಗುರುವಾಯನಕೆರೆ ಭಾಗವಹಿಸಿದ್ದರು.

ಮಧ್ಯಾಹ್ನದವರೆಗೆ 3 ಸಾವಿರ ಪೆನ್ ಮಾರಾಟ ಮಾಡಿ ₹ 30 ಸಾವಿರ ನೆರವನ್ನು ಕುಟುಂಬಕ್ಕೆ ಹಸ್ತಾಂತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.