ವಂಚನೆ–ಪ್ರಾತಿನಿಧಿಕ ಚಿತ್ರ
ಮಂಗಳೂರು: ಬ್ಯಾಂಕ್ ಖಾತೆಗೆ ಸಾಲದ ಹಣ ಹಾಕುವ ನೆಪದಲ್ಲಿ ಹಣ ಕಡಿತ ಮಾಡಿ, ₹ 48,182 ನಷ್ಟ ಉಂಟು ಮಾಡಿದ ಬಗ್ಗೆ ನಗರದ ದಕ್ಷಿಣ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
‘ನನ್ನ ಬ್ಯಾಂಕ್ ಖಾತೆಯಲ್ಲಿ ₹ 63,564 ಹಣವಿತ್ತು. ಜೂನ್ 13ರಂದು ಏಕಾಏಕಿ ಹಣ ಕಡಿತವಾಗಲು ಶುರುವಾಗಿತ್ತು. ನಂತರ ಸಾಲದ ಹಣ ಎಂದು ₹ 4.30 ಲಕ್ಷ ಜಮೆ ಆದ ಸಂದೇಶ ಬಂತು. ನಾನು ಬ್ಯಾಂಕಿನ ವ್ಯವಸ್ಥಾಪಕರಿಗೆ ಕರೆ ಮಾಡಿ, ಯಾವುದೇ ಹಣ ಹಿಂಪಡೆಯದಿದ್ದರೂ ಹಣ ಕಡಿತವಾಗಿದೆ. ಸಾಲಕ್ಕೆ ಅರ್ಜಿ ಹಾಕದೆಯೇ ಹಣ ಜಮೆ ಆಗಿದೆ ಎಂದು ತಿಳಿಸಿದ್ದೆ. ಆನ್‌ಲೈನ್ ವಂಚನೆ ನಡೆಯುತ್ತಿರುವ ಬಗ್ಗೆ ತಿಳಿಸಿದ ಅವರು ಖಾತೆಯಲ್ಲಿದ್ದ ಹಣವನ್ನು ಬೇರೆ ಖಾತೆಗೆ ವರ್ಗಾಯಿಸುವಂತೆ ಸಲಹೆ ನೀಡಿದರು. ಖಾತೆಯಲ್ಲಿ ಉಳಿದಿದ್ದ 15,381 ಅನ್ನು ಮಗಳ ಖಾತೆಗೆ ವರ್ಗಾಯಿಸಿದೆ. ಅಷ್ಟರೊಳಗೆ ನನ್ನ ಖಾತೆಯಿಂದ ₹ 48,182ಕಳೆದುಕೊಂಡಿದ್ದೆ ಎಂದು ಸಂತ್ರಸ್ತ ವ್ಯಕ್ತಿ ದೂರು ನೀಡಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.