ADVERTISEMENT

ನೆರಿಯ ಗ್ರಾಮದಲ್ಲಿ ಪೆಟ್ರೊನೆಟ್ ಪೈಪ್‌ಲೈನ್‌ನಿಂದ ಪೆಟ್ರೋಲ್ ಕಳವು: ಆರೋಪಿ ಸೆರೆ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2025, 7:02 IST
Last Updated 1 ಅಕ್ಟೋಬರ್ 2025, 7:02 IST
ತಮ್ಮಯ್ಯ
ತಮ್ಮಯ್ಯ   

ಉಜಿರೆ: ನೆರಿಯ ಗ್ರಾಮದಲ್ಲಿ ಪೆಟ್ರೊನೆಟ್ ಪೈಪ್‌ಲೈನ್‌ನಿಂದ 2010ರಲ್ಲಿ ಪೆಟ್ರೋಲ್ ಕಳವು ಮಾಡಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗದೆ, ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿ, ಬೆಳ್ತಂಗಡಿ ತಾಲ್ಲೂಕಿನ ಚಿಬಿದ್ರೆ ನಿವಾಸಿ ತಮ್ಮಯ್ಯ ಎಂಬಾತನನ್ನು ಧರ್ಮಸ್ಥಳ ಪೊಲೀಸರು ಬಂಧಿಸಿ ಸೋಮವಾರ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಸೆ.28ರಂದು ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ವ್ಯಕ್ತಿಗಳನ್ನು ಗಮನಿಸಿ ಸುರತ್ಕಲ್ ಪೊಲೀಸ್ ಠಾಣೆಯ ಪಿ.ಸಿ.ಉಮೇಶ್ ವಶಕ್ಕೆ ಪಡೆದು ವಿಚಾರಿಸಿದಾಗ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಚಿಬಿದ್ರೆ ನಿವಾಸಿ ಎಂದು ತಿಳಿಸಿದಾಗ ಧರ್ಮಸ್ಥಳ ಪೊಲೀಸರಿಗೆ ಮಾಹಿತಿ ನೀಡಲಾಯಿತು.

ಬೆಳ್ತಂಗಡಿ ಸಿಪಿಐ ನಾಗೇಶ್ ಕದ್ರಿ ಮತ್ತು ಧರ್ಮಸ್ಥಳ ಠಾಣೆಯ ಪಿಎಸ್‌ಐ ಸಮರ್ಥ್ ಆರ್.ಗಾಣಿಗೇರ ನೇತೃತ್ವದಲ್ಲಿ ಸಿಬ್ಬಂದಿ ವೃಷಭ, ಚರಣ್‌ರಾಜ್, ಗೋವಿಂದರಾಜ್ ಮತ್ತು ಜಗದೀಶ್ ಆರೋಪಿಯನ್ನು ಬಂಧಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.