ADVERTISEMENT

ಮಂಗಳೂರು | ವಿದೇಶಿಯರ ವಾಸ್ತವ್ಯ: ನೋಂದಣಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2023, 5:01 IST
Last Updated 19 ಆಗಸ್ಟ್ 2023, 5:01 IST
ವಿದೇಶಿಯರು (ಪ್ರಾತಿನಿಧಿಕ ಚಿತ್ರ)
ವಿದೇಶಿಯರು (ಪ್ರಾತಿನಿಧಿಕ ಚಿತ್ರ)   

ಮಂಗಳೂರು: ನಗರದಲ್ಲಿ ವಾಸ್ತವ್ಯ ಹೂಡುವ ವಿದೇಶಿಯರ ಬಗ್ಗೆ ಸಕಾಲಕ್ಕೆ ಮಾಹಿತಿ ನೀಡುವಂತೆ ಮತ್ತು 24 ಗಂಟೆಗಳಲ್ಲಿ ಆನ್‌ಲೈನ್‌ನಲ್ಲಿ ನೋಂದಣಿ ಮಾಡುವಂತೆ ನಗರ ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಜೈನ್ ಸೂಚನೆ ನೀಡಿದ್ದಾರೆ.

ವಿವಿಧ ಕಾರಣಗಳಿಗೆ ನಗರಕ್ಕೆ ಬರುವ ವಿದೇಶಿಯರು ಹೋಟೆಲ್, ಅತಿಥಿಗೃಹ, ಅಪಾರ್ಟ್‌ಮೆಂಟ್‌ಗಳಲ್ಲಿ ವಾಸ್ತವ್ಯ ಹೂಡುತ್ತಾರೆ. ರಾಷ್ಟ್ರೀಯ ಭದ್ರತೆ ದೃಷ್ಟಿಯಿಂದ ಅವರು ವಾಸ್ತವ್ಯ ಹೂಡಿದ 24 ಗಂಟೆಗಳ ಒಳಗೆ ಆನ್‌ಲೈನ್‌ನಲ್ಲಿ (s-form ಮತ್ತು c-form) ನೋಂದಣಿಯನ್ನು ಮಾಡಬೇಕು ಎಂದರು.

ವಿದೇಶಿಗರು ತಂಗುವ ಕೆಲವು ಹೋಟೆಲ್, ಅತಿಥಿಗೃಹ, ಸರ್ವಿಸ್ ಅಪಾರ್ಟ್‌ಮೆಂಟ್‌, ಶಿಕ್ಷಣ ಸಂಸ್ಥೆಗಳಲ್ಲಿ ನಿಗದಿತ ಸಮಯಕ್ಕೆ ವಿದೇಶಿಗರ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ಸಲ್ಲಿಸದಿರುವುದು ಕಂಡುಬಂದಿದೆ. ಸಂಬಂಧಪಟ್ಟವರು ಈ ಬಗ್ಗೆ ಗಮನಹರಿಸಬೇಕು ಎಂದು ಅವರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.