ADVERTISEMENT

ಮಂಗಳೂರು: ಮೇ 12,13ರಂದು ಪುನಃಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ

​ಪ್ರಜಾವಾಣಿ ವಾರ್ತೆ
Published 10 ಮೇ 2022, 15:33 IST
Last Updated 10 ಮೇ 2022, 15:33 IST

ಮಂಗಳೂರು: ಕೋಡಿಯಾಲ್‌ಬೈಲ್‌ ಸ್ವಾಮಿ ಈಶ್ವರಾನಂದ ಭಜನಾ ಮಂಡಳಿವಿಠೋಭ ಮಂದಿರದಲ್ಲಿ ವಿಠೋಭ ದೇವರ ಬಿಂಬದ ಪುನಃಪ್ರತಿಷ್ಠೆ ಹಾಗೂ ಬ್ರಹ್ಮಕಲಶಾಭಿಷೇಕ ಮೇ 12 ಮತ್ತು 13ರಂದು ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಸಿ ಡಾ.ಎಂ.ಜಗದೀಶ್ ಶೆಟ್ಟಿ ಈ ಕುರಿತು ಮಾಹಿತಿ ನೀಡಿ, ‘ವಿಠಲದಾಸ ತಂತ್ರಿವರೇಣ್ಯರ ನೇತೃತ್ವದಲ್ಲಿ ದೇವರ ಬಿಂಬ ಪುನಃ ಪ್ರತಿಷ್ಠೆ ಸೇರಿದಂತೆ ಧಾರ್ಮಿಕ ವಿಧಿಗಳು ನೆರವೇರಲಿವೆ’ ಎಂದರು.

ಮೇ 12ರಂದು ಸಂಜೆ 6ರಿಂದ ಸಾಮೂಹಿಕ ಪ್ರಾರ್ಥನೆ, ಆಲಯ ಸ್ವೀಕಾರ, ತೋರಣ ಮುಹೂರ್ತ, ಪುಣ್ಯಾಹ, ವಾಸ್ತು ರಾಕ್ಷೋಘ್ನ ಹೋಮಗಳು, ಬಿಂಬ ಶುದ್ಧಿ ಅಧಿವಾಸ ನೆರವೇರಲಿದೆ. ಮೇ 13ರಂದು ಬೆಳಿಗ್ಗೆ 7ರಿಂದ ಪುಣ್ಯಾಹ, ಗಣಯಾಗ, ಪ್ರತಿಷ್ಠಾಹೋಮ, ಶಿಖರ ಪ್ರತಿಷ್ಠೆ, 9.32ರ ವೇಳೆಗೆ ಬಿಂಬ ಪ್ರತಿಷ್ಠೆ, ಸಾನ್ನಿಧ್ಯ ಮಹಾಕಲಶಾಭಿಷೇಕ, ಪ್ರಸನ್ನ ಪೂಜೆ ಹಾಗೂ ಮಧ್ಯಾಹ್ನ 12.30ರಿಂದ ಮಹಾ ಅನ್ನಸಂತರ್ಪಣೆ ನಡೆಯಲಿದೆ ಎಂದರು.

ADVERTISEMENT

ಧಾರ್ಮಿಕ ಸಭೆಯನ್ನು ಶಾಸಕ ಡಿ.ವೇದವ್ಯಾಸ ಕಾಮತ್ ಉದ್ಘಾಟಿಸುವರು. ವಿವಿಧ ಕ್ಷೇತ್ರಗಳ ಧಾರ್ಮಿಕ ಮುಖಂಡರು, ಸಾಮಾಜಿಕ ಮುಖಂಡರು, ಭಜನಾ ಮಂಡಳಿಗಳು ಭಾಗವಹಿಸಲಿವೆ ಎಂದರು.

ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ಕೋಟಿ ಪ್ರಸಾದ್ ಆಳ್ವ, ಆಡಳಿತ ಮಂಡಳಿ ಅಧ್ಯಕ್ಷ ಜೆ.ಜಯ, ಉಪಾಧ್ಯಕ್ಷ ಜೆ.ಆನಂದ, ಕಾರ್ಯದರ್ಶಿ ಕಿರಣ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.