ADVERTISEMENT

ಬಿಲ್ಲವ ಸಮಾಜದಿಂದ ‌ಪ್ರವೀಣ್‌ ನೆಟ್ಟಾರು ಕುಟುಂಬಕ್ಕೆ ಮನೆ ನಿರ್ಮಿಸುವ ಸಂಕಲ್ಪ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2022, 2:50 IST
Last Updated 5 ಆಗಸ್ಟ್ 2022, 2:50 IST
ಪ್ರವೀಣ್‌ ನೆಟ್ಟಾರು ಕುಟುಂಬಕ್ಕೆ ಮನೆ ನಿರ್ಮಿಸಿಕೊಡಲು ₹7 ಲಕ್ಷದ ಚೆಕ್‌ ಅನ್ನು ಬಿಲ್ಲವ ಸಮಾಜ, ಬಿಲ್ಲವ ಬ್ರಿಗೇಡ್‌ನ ಪ್ರಮುಖರು ಗುತ್ತಿಗೆದಾರರಿಗೆ ನೀಡಿದರು.
ಪ್ರವೀಣ್‌ ನೆಟ್ಟಾರು ಕುಟುಂಬಕ್ಕೆ ಮನೆ ನಿರ್ಮಿಸಿಕೊಡಲು ₹7 ಲಕ್ಷದ ಚೆಕ್‌ ಅನ್ನು ಬಿಲ್ಲವ ಸಮಾಜ, ಬಿಲ್ಲವ ಬ್ರಿಗೇಡ್‌ನ ಪ್ರಮುಖರು ಗುತ್ತಿಗೆದಾರರಿಗೆ ನೀಡಿದರು.   

ಸುಳ್ಯ: ದುಷ್ಕರ್ಮಿಗಳಿಂದ ಹತ್ಯೆಯಾದ ಬಿಜೆಪಿ ಯುವ ಮೊರ್ಚಾದ ಮುಖಂಡ ಪ್ರವೀಣ್ ನೆಟ್ಟಾರು ಮನೆಗೆ ಬುಧವಾರ ಭೇಟಿ ನೀಡಿದ ಬಿಲ್ಲವ ಸಮಾಜ ಹಾಗೂ ಬಿಲ್ಲವ ಬ್ರಿಗೇಡ್‌ನ ಪ್ರಮುಖರು ಪ್ರವೀಣ್ ಕುಟುಂಬಕ್ಕೆ ಮನೆ ನಿರ್ಮಿಸಿಕೊಡುವ ಸಂಕಲ್ಪ ಮಾಡಿದರು. ಇದೇ ವೇಳೆ ₹ 7 ಲಕ್ಷದ ಚೆಕ್‌ ಅನ್ನು ಮನೆಯವರಿಗೆ ನೀಡಿ, ಅದನ್ನು ಮನೆಯ ಕೆಲಸ ನಿರ್ವಹಿಸಲಿರುವ ಗುತ್ತಿಗೆದಾರರಿಗೆ ಹಸ್ತಾಂತರ ಮಾಡಿಸಿದರು.

ಬಿಲ್ಲವ ಸಮಾಜದ ಚಟುವಟಿಕೆಗಳಲ್ಲಿ ಪ್ರವೀಣ್ ಸಕ್ರಿಯವಾಗಿ ತೊಡಗಿಸಿ ಕೊಂಡಿದ್ದರು. ಅವರ ಆಶಯದಂತೆ ಸುಮಾರು ₹ 45 ಲಕ್ಷ ವೆಚ್ಚದಲ್ಲಿ ಮನೆಯನ್ನು ನಿರ್ಮಿಸಿಕೊಡುವುದಾಗಿ ಬಿಲ್ಲವ ಸಮಾಜದ ಪ್ರಮುಖರು ಭರವಸೆ ನೀಡಿದರು. ಇದೇ ವೇಳೆ ಮನೆಯ ನಕ್ಷೆಯನ್ನು ಪ್ರವೀಣ್‌ ಕುಟುಂಬಕ್ಕೆ ತೋರಿಸಿ ಒಪ್ಪಿಗೆಯನ್ನು ಪಡೆದರು.

ADVERTISEMENT

ಮುಖಂಡರಾದ ‌ಭಾಸ್ಕರ್ ಎಸ್‌. ಕೋಟ್ಯಾನ್, ಜಯಂತ ನಡುಬೈಲ್‌, ಶರತ್‌ಚಂದ್ರ ಸನಿಲ್, ಗಂಗಾಧರ ಪೂಜಾರಿ, ಶಂಕರ್ ಕುಂದರ್, ಸೂರಜ್ ಕಲ್ಯ, ಸತೀಶ್ ಪೂಜಾರಿ, ಕಾವ್ಯಶ್ರೀ, ಹರೀಶ್ ಅಮೀನ್, ವಿಜಯ ಕುಮಾರ್ ಕಾರ್ಕಳ, ಸತೀಶ್ ನಾಯಕ್, ಹರೀಶ್ ಮುನಿಯಾಲು, ಅವಿನಾಶ್ ಸುವರ್ಣ, ಜೀವನ್ ನೀರುಮಾರ್ಗ, ಕಿಶನ್ ಅಮೀನ್, ದೀಪಕ್, ಪ್ರಶಾಂತ್, ಸಂದೀಪ್ ಶಕ್ತಿನಗರ, ಮೋಹನ್ ದಾಸ್ ವಾಮಂಜೂರು, ಜಗದೀಶ್ ಪೂಜಾರಿ ಸಾಣೂರು, ರತ್ನಾಕರ ಅಮೀನ್, ಪ್ರಕಾಶ್ ಕಾರ್ಕಳ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.