ಪುತ್ತೂರು: ಇಲ್ಲಿನ ಬಂಟರ ಸಂಘಕ್ಕೆ ಸರ್ಕಾರದಿಂದ ಮೂರು ಎಕರೆ ಎಕರೆ ಮಂಜೂರಾಗಿದೆ. ಸಂಘಕ್ಕೆ ಸ್ವಂತ ಜಾಗ ಬೇಕು ಎಂಬ ಹಲವು ವರ್ಷಗಳ ಬೇಡಿಕೆ ಈಡೇರಿಸಿದ್ದೇನೆ. ಈ ಜಾಗ 10 ದಿನಗಳೊಳಗೆ ಬಂಟರ ಸಂಘದ ಹೆಸರಿಗೆ ನೋಂದಣಿಯಾಗಲಿದೆ ಎಂದು ಶಾಸಕ ಅಶೋಕ್‌ಕುಮಾರ್ ರೈ ಹೇಳಿದರು.
ಪುತ್ತೂರು ಬಂಟರ ಸಂಘದ ನೇತೃತ್ವದಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲ್ಲೂಕು ಸಮಿತಿ, ಮಹಿಳಾ ಬಂಟರ ವಿಭಾಗ, ಯುವ ಬಂಟರ ವಿಭಾಗ, ವಿದ್ಯಾರ್ಥಿ ಬಂಟರ ವಿಭಾಗದ ಸಹಯೋಗದಲ್ಲಿ ಒಳಮೊಗ್ರು ಗ್ರಾಮದ ಕೈಕಾರದ ಪನಡ್ಕ ಪಳ್ಳತ್ತಾರು ಜುಮಾದಿ ದೈವಸ್ಥಾನದ ಸಮೀಪದ ಸರಸ್ವತಿ ಹೊಸಲಕ್ಕೆ ಅವರ ಗದ್ದೆಯಲ್ಲಿ ಭಾನುವಾರ ನಡೆದ ‘ಬಂಟರೆ ಕೆಸರ್ಡ್ ಒಂಜಿ ಕುಸಲ್’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಈ ಜಾಗದ ಪಕ್ಕ ಇರುವ ಇನ್ನೂ ಎರಡೂವರೆ ಎಕರೆಯೂ ಬಂಟರ ಸಂಘಕ್ಕೆ ಮಂಜೂರಾಗಲಿದೆ. ಈ ಜಾಗದಲ್ಲಿ ಗುಣಮಟ್ಟದ ಆಂಗ್ಲ ಮಾಧ್ಯಮ ಶಾಲೆ, ಸಭಾ ಭವನ ನಡೆಯಲಿದೆ. ಅಭಿವೃದ್ಧಿ ಕಾರ್ಯಗಳಿಗೆ ಹಣ ಇರುವವರು ನೆರವಾಗಬೇಕು ಎಂದರು.
ಪುತ್ತೂರು ತಾಲ್ಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಬಂಟ ಸಮಾಜದ ಹಿರಿಯರಾದ ನಾರಾಯಣ ರೈ ಬಾರಿಕೆ ಮತ್ತು ಸುಂದರ ರೈ ಅವರು ಕ್ರೀಡಾಕೂಟದ ದೀಪ ಬೆಳಗಿದರು. ಪುತ್ತೂರು ಬಂಟರ ಸಂಘದ ಮಾಜಿ ಅಧ್ಯಕ್ಷರಾದ ಬೂಡಿಯಾರ್ ರಾಧಾಕೃಷ್ಣ ರೈ, ಶಶಿಕುಮಾರ್ ರೈ ಬಾಲ್ಯೊಟ್ಟು ಮಾತನಾಡಿದರು.
ಮುಖಂಡರಾದ ದುರ್ಗಾಪ್ರಸಾದ್ ರೈ ಕುಂಬ್ರ, ಸಾಜ ರಾಧಾಕೃಷ್ಣ ಆಳ್ವ, ದಯಾನಂದ ರೈ ಕೋರ್ಮಂಡ, ಪುರಂದರ ರೈ ಮಿತ್ರಂಪಾಡಿ, ದಯಾನಂದ ರೈ ಮನವಳಿಕೆ, ನಿತ್ಯಾನಂದ ಶೆಟ್ಟಿ ಮನವಳಿಕೆ, ಗೀತಾ ಮೋಹನ್ ರೈ, ಕುಸುಮಾ ಪಿ.ಶೆಟ್ಟಿ, ಹರ್ಷಕುಮಾರ್ ರೈ ಮಾಡಾವು, ಮಲ್ಲಿಕಾ ಪ್ರಶಾಂತ್ ಪಕ್ಕಳ, ಶಿವನಾಥ ರೈ ಮೇಗಿನಗುತ್ತು, ದಂಬೆಕಾನ ಸದಾಶಿವ ರೈ, ಮೋಹನ ರೈ ನರಿಮೊಗರು, ರಾಜೀವ ರೈ ಕುತ್ಯಾಡಿ, ಕೃಷ್ಣಪ್ರಸಾದ್ ಆಳ್ವ, ಶಿವರಾಮ ಆಳ್ವ ಕುರಿಯ, ಸಂತೋಷ್ ಶೆಟ್ಟಿ ಸಾಜ, ಶಶಿಕಿರಣ್ ರೈ ನೂಜಿಬೈಲು, ರವಿಪ್ರಸಾದ್ ಶೆಟ್ಟಿ ಬನ್ನೂರು, ರಮೇಶ್ ರೈ ಡಿಂಬ್ರಿ, ಚೇತನ್ ರೈ ಮಾಣಿ, ಸುಂದರ ರೈ ಮಂದಾರ, ದಯಾನಂದ ರೈ ಬೆಟ್ಟಂಪಾಡಿ ಭಾಗವಹಿಸಿದ್ದರು.
ಬಂಟೆರೆ ಕೆಸರ್ಡ್ ಒಂಜಿ ಕುಸಲ್ ಸಮಿತಿ ಅಧ್ಯಕ್ಷ ಸೀತಾರಾಮ ರೈ ಕೈಕಾರ ಸ್ವಾಗತಿಸಿದರು. ಕಾರ್ಯದರ್ಶಿ ಪ್ರಜ್ವಲ್ ರೈ ತೊಟ್ಲ, ನವೀನ್ ರೈ ಪನಡ್ಕ, ಗಿರೀಶ್ ರೈ ಮೂಲೆ, ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ, ರಂಜಿನಿ ಶೆಟ್ಟಿ, ಸತ್ಯನಾರಾಯಣ ರೈ, ಮನ್ಮಥ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.