
ಪ್ರಜಾವಾಣಿ ವಾರ್ತೆ
ಮೋಕ್ಷಿತ್
ಪುತ್ತೂರು: ಕಾಣಿಯೂರು ಸುಬ್ರಹ್ಮಣ್ಯ ರಸ್ತೆಯ ಪುರುಷರಕಟ್ಟೆ ಎಂಬಲ್ಲಿ ಬುಧವಾರ ಬಸ್ ಡಿಕ್ಕಿ ಹೊಡೆದು, ಬೈಕ್ ಸವಾರರೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತರನ್ನು ಕುಂಡಡ್ಕ ಬಾಲಮೂಲೆಯ ಮೋಕ್ಷಿತ್ (23ವರ್ಷ) ಎಂದು ಗುರುತಿಸಲಾಗಿದೆ. ಪುರುಷರಕಟ್ಟೆಯ ಬಿಂದು ಕಾರ್ಖಾನೆಯಲ್ಲಿ ಅವರು ಶಿಪಾನ್ ಮೆಷಿನ್ ಆಪರೇಟರ್ ಆಗಿದ್ದರು. ಬೈಕನ್ನು ಸರ್ವಿಸ್ ಸ್ಟೇಷನ್‌ಗೆ ಒಯ್ದಿದ್ದ ಅವರು ಹಿಂತಿರುಗಿ ಬರುವಾಗ ಅಪಘಾತ ಸಂಭವಿಸಿದೆ.
ಯುವಕನ ತಂದೆ ಆನಂದ ಗೌಡ ಅವರು ಪುತ್ತೂರಿನ ಸಂಚಾರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.