ADVERTISEMENT

‘ಸಮಾಜಕ್ಕಾಗಿ ಗುರಿ ಅಚಲವಾಗಿರಲಿ’

ಹನುಮಗಿರಿ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವದ ಪೂರ್ವಭಾವಿ ಸಭೆ; ಸಮಿತಿಗೆ ಪದಾಧಿಕಾರಿಗಳ ಆಯ್ಕೆ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2025, 5:25 IST
Last Updated 28 ಅಕ್ಟೋಬರ್ 2025, 5:25 IST
ಪುತ್ತೂರು ತಾಲ್ಲೂಕಿನ ಈಶ್ವರಮಂಗಲದ ಹನುಮಗಿರಿ ಕ್ಷೇತ್ರದಲ್ಲಿ ಎ.9ರಿಂದ 12ರ ತನಕ ನಡೆಯಲಿರುವ ಕೋದಂಡರಾಮ-ಪಂಚಮುಖಿ ಆಂಜನೇಯ ದೇವರ ಬ್ರಹ್ಮಕಲಶೋತ್ಸವದ ಪೂರ್ವಭಾವಿ ಸಭೆಯಲ್ಲಿ ಕುಂಟಾರು ರವೀಶ ತಂತ್ರಿ ಮಾತನಾಡಿದರು. ನಳಿನ್‌ ಕುಮಾರ್ ಕಟೀಲು, ನನ್ಯ ಅಚ್ಚುತ ಮೂಡೆತ್ತಾಯ ಪಾಲ್ಗೊಂಡಿದ್ದರು  
ಪುತ್ತೂರು ತಾಲ್ಲೂಕಿನ ಈಶ್ವರಮಂಗಲದ ಹನುಮಗಿರಿ ಕ್ಷೇತ್ರದಲ್ಲಿ ಎ.9ರಿಂದ 12ರ ತನಕ ನಡೆಯಲಿರುವ ಕೋದಂಡರಾಮ-ಪಂಚಮುಖಿ ಆಂಜನೇಯ ದೇವರ ಬ್ರಹ್ಮಕಲಶೋತ್ಸವದ ಪೂರ್ವಭಾವಿ ಸಭೆಯಲ್ಲಿ ಕುಂಟಾರು ರವೀಶ ತಂತ್ರಿ ಮಾತನಾಡಿದರು. ನಳಿನ್‌ ಕುಮಾರ್ ಕಟೀಲು, ನನ್ಯ ಅಚ್ಚುತ ಮೂಡೆತ್ತಾಯ ಪಾಲ್ಗೊಂಡಿದ್ದರು     

ಪುತ್ತೂರು: ‘ಧರ್ಮಕಾರ್ಯ ನಡೆಯುವಲ್ಲಿ ಭಕ್ತರು ಸಮರ್ಪಣೆ ಭಾವದಿಂದ ಜವಾಬ್ದಾರಿ ನಿರ್ವಹಿಸಬೇಕು. ಅದರಿಂದ ಯಶಸ್ಸು ಪ್ರಾಪ್ತಿಯಾಗುತ್ತದೆ. ಇಂಥ ಉದ್ದೇಶವಿರಿಸಿಕೊಂಡು ಹನುಮಗಿರಿಯ ಬ್ರಹ್ಮಕಲಶೋತ್ಸವದಲ್ಲಿ ಸಂಘಟಿತರಾಗಿ ಜವಾಬ್ದಾರಿ ನಿರ್ವಹಿಸಬೇಕು. ಹಿಂದೂ ಸಮಾಜದ ಒಳಿತಿಗಾಗಿ ಗುರಿ ಅಚಲವಾಗಿರಬೇಕು’ ಎಂದು ಕುಂಟಾರು ರವೀಶ ತಂತ್ರಿ ಹೇಳಿದರು.

ಪುತ್ತೂರು ತಾಲ್ಲೂಕಿನ ಈಶ್ವರಮಂಗಲದ ಹನುಮಗಿರಿ ಕ್ಷೇತ್ರದಲ್ಲಿ ಮುಂದಿನ ವರ್ಷ ನಡೆಯಲಿರುವ ಕೋಡಂಡರಾಮ-ಪಂಚಮುಖಿ ಆಂಜನೇಯ ದೇವರ ಬ್ರಹ್ಮಕಲಶೋತ್ಸವದ ಅಂಗವಾಗಿ ಈಚೆಗೆ ನಡೆದ ಸಮಾಲೋಚನೆ ಮತ್ತು ಸಮಿತಿ ರಚನೆ ಸಭೆಯಲ್ಲಿ ಮಾತನಾಡಿದರು.

ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ನಳಿನ್‌ ಕುಮಾರ್ ಕಟೀಲ್ ಮಾತನಾಡಿ, ಬ್ರಹ್ಮಕಲಶೋತ್ಸವದಲ್ಲಿ ಹಿಂದೂ ಸಮಾಜಕ್ಕೆ ಹೊಸ ಚೈತನ್ಯ, ಶಕ್ತಿ ನೀಡುವ ಕಾರ್ಯಕ್ರಮಗಳು ನಡೆಯಲಿವೆ. ಕೋಡಂಡರಾಮನ ಬ್ರಹ್ಮಕಲಶೋತ್ಸವ ಸಾಮರಸ್ಯ, ಸಮಾನತೆಯ ಕಾರ್ಯಕ್ರಮವಾಗಲಿದೆ ಎಂದರು.

ADVERTISEMENT

ಹನುಮಗಿರಿ ಕ್ಷೇತ್ರದ ಆಡಳಿತ ಧರ್ಮದರ್ಶಿ ನನ್ಯ ಅಚ್ಚುತ ಮೂಡೆತ್ತಾಯ, ಮುಖಂಡರಾದ ಅರುಣ್‌ ಕುಮಾರ್ ಪುತ್ತಿಲ, ಕಾವು ಹೇಮನಾಥ ಶೆಟ್ಟಿ, ಮುರಳಿಕೃಷ್ಣ ಹಸಂತಡ್ಕ, ಶ್ರೀಕಾಂತ್ ಕಾಸರಗೋಡು, ಪ್ರವೀಣ್ ಸರಳಾಯ, ಆರ್.ಸಿ ನಾರಾಯಣ ರೆಂಜ, ಶ್ರೀರಾಮ ಪಕ್ಕಳ ಕರ್ನೂರುಗುತ್ತು, ಗಿರಿಶಂಕರ ಸುಲಾಯ ಪಾಲ್ಗೊಂಡಿದ್ದರು.

ಧರ್ಮದರ್ಶಿ ಶಿವರಾಮ್ ಪಿ ಈಶ್ವರಮಂಗಲ ಸ್ವಾಗತಿಸಿದರು. ದೇವಿಪ್ರಕಾಶ್ ಶೆಟ್ಟಿ ಕುತ್ಯಾಳ ನಿರೂಪಿಸಿದರು.

ಬ್ರಹ್ಮಕಲಶೋತ್ಸವ ಸಮಿತಿ

ಉಪಾಧ್ಯಕ್ಷರಾಗಿ ಸಂಜೀವ ಮಠಂದೂರು, ಶಕುಂತಳಾ ಟಿ.ಶೆಟ್ಟಿ, ಶಶಿಕುಮಾರ್ ರೈ ಬಾಲ್ಯೊಟ್ಟು, ಎಸ್.ಬಿ ಜಯರಾಮ ರೈ ಬಳಜ್ಜ, ಎಸ್.ಎನ್ ಮನ್ಮಥ, ವಿಶ್ವೇಶ್ವರ ಭಟ್ ಬಂಗಾರಡ್ಕ, ಅರುಣ್‌ ಕುಮಾರ್ ಪುತ್ತಿಲ, ಚನಿಲ ತಿಮ್ಮಪ್ಪ ಶೆಟ್ಟಿ, ಜಯಂತ ನಡುಬೈಲು, ಕಾವು ಹೇಮನಾಥ ಶೆಟ್ಟಿ, ಸುರೇಶ್ ಪುತ್ತೂರಾಯ, ವಾಸು ಪೂಜಾರಿ ಗುಂಡ್ಯಡ್ಕ, ಶ್ರೀಕಾಂತ್ ಕಾಸರಗೋಡು, ಬೂಡಿಯಾರ್ ರಾಧಾಕೃಷ್ಣ ರೈ, ಕೇಶವ ಮುಳಿಯ ಸುಳ್ಯ, ಜೀವಂಧರ್ ಜೈನ್, ಹರೀಶ್ ಕಂಚಿಪಿಲಿ, ಭಾಮಿ ಅಶೋಕ್ ಶೆಣೈ, ರವಿಕಿರಣ ಶೆಟ್ಟಿ ಬೆದ್ರಾಡಿ, ಪ್ರಧಾನ ಕಾರ್ಯದರ್ಶಿಗಳಾಗಿ ಸುಬ್ಬಪ್ಪ ಪಟ್ಟೆ, ಗಿರಿಧರ್ ಶೆಟ್ಟಿ, ರಾಜೇಶ್ ಬನ್ನೂರು, ಆರ್.ಸಿ ನಾರಾಯಣ ರೆಂಜ, ಸವಿತಾ ರೈ ನೆಲ್ಲಿತ್ತಡ್ಕ, ಪೂರ್ಣಚಂದ್ರ ನೆಲ್ಲಿತ್ತಡ್ಕ, ಕಾರ್ಯದರ್ಶಿಗಳಾಗಿ ದೇವಿಪ್ರಕಾಶ್ ಶೆಟ್ಟಿ ಕುತ್ಯಾಳ, ದೀಪಕ್ ಮುಂಡ್ಯ, ಚಿನ್ಮಯ ರೈ ನಡುಬೈಲು, ಶ್ರೀನಿವಾಸ ಭಟ್ ಚಂದುಕೂಡ್ಲು, ಮಹಾಲಿಂಗ ಪಂಚೋಡಿ, ಪ್ರಕಾಶ್ ಕೈಕಾರ, ಚಂದ್ರಶೇಖರ್ ಆಳ್ವ, ಶಿವರಾಮ ಭಟ್ ಬೀರ್ಣಕಜೆ, ಲಿಂಗಪ್ಪ ಗೌಡ, ಪ್ರಶಾಂತಿ ರೈ ಕುತ್ಯಾಳ, ಸೌಮ್ಯಾ ಗಜಾನನ ಆಯ್ಕೆಯಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.