ADVERTISEMENT

ಜಿಲ್ಲೆಯ ವಿವಿಧೆಡೆ ಮಳೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2021, 14:37 IST
Last Updated 21 ಫೆಬ್ರುವರಿ 2021, 14:37 IST
ವಿಟ್ಲದ ಮಾಣಿಯಲ್ಲಿ ಭಾನುವಾರ ಸುರಿದ ಮಳೆ
ವಿಟ್ಲದ ಮಾಣಿಯಲ್ಲಿ ಭಾನುವಾರ ಸುರಿದ ಮಳೆ   

ಸುಳ್ಯ: ಇಲ್ಲಿನ ತಾಲ್ಲೂಕಿನ ವಿವಿಧೆಡೆ ಸಾಧಾರಣ ಮಳೆ ಸುರಿದಿದೆ. ಭಾನುವಾರ ಸಂಜೆ ವೇಳೆ ಮಳೆ ಸುರಿದಿದ್ದು, ಸುಳ್ಯ ಪಟ್ಟಣದಲ್ಲಿ ಹೆಚ್ಚು ಮಳೆ ಸುರಿದಿದೆ.

ಬೆಳ್ತಂಗಡಿ ವರದಿ: ತಾಲ್ಲೂಕಿನಲ್ಲಿ ಭಾನುವಾರ ಸಂಜೆ ವೇಳೆ ಸಾಧರಣ ಮಳೆಯಾಗಿದೆ. ಸುಮಾರು ಅರ್ಧ ಗಂಟೆಯ ಕಾಲ ಮಳೆ ಸುರಿದಿದೆ. ತಾಲ್ಲೂಕಿನ ಬೆಳ್ತಂಗಡಿ, ಅಳದಂಗಡಿ, ನಾರಾವಿ, ವೇಣೂರು, ಮಡಂತ್ಯಾರು ಪ್ರದೇಶಗಳಲ್ಲಿ ಸಾಧಾರಣ ಮಳೆ ಸುರಿದಿದೆ.

ರಾತ್ರಿ ವೇಳೆಯೂ ಮೋಡ ಕವಿದ ವಾತಾವರಣವಿದ್ದು, ಮಳೆ ಸುರಿಯುವ ಸಾಧ್ಯತೆ ಹೆಚ್ಚು.

ADVERTISEMENT

ವಿಟ್ಲ ವರದಿ: ಇಲ್ಲಿನ ಪರಿಸರದಲ್ಲಿ ತುಂತುರು ಮಳೆಯಾಗಿದ್ದು, ಮಾಣಿ ಭಾಗದಲ್ಲಿ ಭಾರಿ ಮಳೆ ಸುರಿದಿದೆ.

ವಿಟ್ಲದ ಕನ್ಯಾನ, ವಿಟ್ಲ ಪೇಟೆಯಲ್ಲಿ ಮೋಡ ಕವಿದ ವಾತಾವರಣ ಕಂಡು ಬಂದಿದ್ದು, ಮಾಣಿ ಭಾಗದಲ್ಲಿ ಮಾತ್ರ ಹೆಚ್ಚು ಮಳೆಯಾಗಿದೆ. ವಿಟ್ಲದ ಅನಂತಾಡಿ, ಕೊಡಾಜೆ ಭಾಗದಲ್ಲಿ ತುಂತುರು ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.