ADVERTISEMENT

ಮಂಗಳೂರು: ಹಗ್ಗ ತುಂಡಾಗಿ ಕಡಲ ತೀರಕ್ಕೆ ಬಂದು ನಿಂತ ಬೋಟ್‌ಗಳು

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2021, 5:11 IST
Last Updated 30 ಮಾರ್ಚ್ 2021, 5:11 IST
   

ಮಂಗಳೂರು: ಸೋಮವಾರ ರಾತ್ರಿ ನಡೆದ ಸುರಿದ ಗಾಳಿ, ಮಳೆಯಿಂದಾಗಿ ನಗರದ ಹಳೆಯ ದಕ್ಕೆಯಲ್ಲಿ ಲಂಗರು ಹಾಕಿದ್ದ ಬೋಟ್‌ಗಳ ಹಗ್ಗ ತುಂಡಾಗಿದ್ದು, ಹಲವು ಬೋಟುಗಳು ಪಣಂಬೂರು ಮೀನಕಳಿ, ಚಿತ್ರಪುರ, ಸುರತ್ಕಲ್, ಸಸಿಹಿತ್ಲು ಕಡಲ ತೀರಕ್ಕೆ ಬಂದಿವೆ.

ಗಾಳಿಯ ರಭಸಕ್ಕೆ ಬೋಟ್‌ಗಳು ಒಂದೆಡೆಯಿಂದ ಇನ್ನೊಂದೆಡೆ ಚಲಿಸಿದ್ದು, ಇದರಿಂದ ಬೋಟ್‌ಗಳಿಗೆ ಹಾನಿಯಾಗಿದೆ. ನಷ್ಟ ಅನುಭವಿಸುವಂತಾಗಿದೆ ಎಂದು ಮೀನುಗಾರರು ತಿಳಿಸಿದ್ದಾರೆ.

ಜಿಲ್ಲೆಯಾದ್ಯಂತ ಗಾಳಿ, ಗುಡುಗು ಸಹಿತ ಭಾರೀ ಮಳೆಯಾಗಿದ್ದು, ಕೆಲವೆಡೆ ಮರ ಬಿದ್ದು ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ಬಂಟ್ವಾಳದ ಬೆಂಜನಪದವಿನಲ್ಲಿ ವಿದ್ಯುತ್‌ ಕಂಬ ಉರುಳಿತ್ತು. ನಗರವೂ ಸೇರಿದಂತೆ ಜಿಲ್ಲೆಯ ಹಲವೆಡೆ ರಾತ್ರಿ ವಿದ್ಯುತ್‌ ಪೂರೈಕೆ ಸ್ಥಗಿತವಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.