ಮೂಲ್ಕಿ: ತಾಲ್ಲೂಕಿನಲ್ಲಿ ಶುಕ್ರವಾರ ಮಳೆ ಸ್ವಲ್ಪ ಬಿಡುವು ನೀಡಿದ್ದು, ನೆರೆ ನೀರು ಇಳಿಕೆಯಾಗಿದೆ. ನದಿ ಬದಿಯಲ್ಲಿರುವ ಮನೆಯವರು ಕೆಸರು ಮಿಶ್ರಿತ ಮನೆಯನ್ನು ಸ್ವಚ್ಛಗೊಳಿಸಿದರು.
ಏಳಿಂಜೆ ಬಳಿಯ ಪಟ್ಟೆ ಹಾಗೂ ಮಟ್ಟು ಪ್ರದೇಶದ ಕಕ್ವ ಗ್ರಾಮದಲ್ಲಿ ಶಾಂಭವಿ ನದಿ ಉಕ್ಕಿ ಹರಿದು ಮನೆ, ಅಂಗಡಿಗಳು ಮುಳುಗಿದ್ದವು. ಸಂಗ್ರಹಿಸಿದ್ದ ಗೊಬ್ಬರ, ಪೈರು ಕೊಚ್ಚಿಕೊಂಡು ಹೋಗಿದೆ ಎಂದು ಕೃಷಿಕರು ಅಧಿಕಾರಿಗಳಲ್ಲಿ ಸಮಸ್ಯೆ ವಿವರಿಸಿದರು.
ಕೆಮ್ರಾಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಕ್ಷಿಕೆರೆ, ಪಂಜ ಮಧ್ಯ ಸಂಪರ್ಕ ರಸ್ತೆ ಜಲಾವೃತವಾಗಿದ್ದು, ನೆರೆ ನೀರು ತಗ್ಗಿಲ್ಲ. ಸಮೀಪದ ಪಂಜ, ಕೊಯಿಕುಡೆ, ಮೊಗಪಾಡಿ, ಉಲ್ಯ, ಬೈಲಗುತ್ತು ಪರಿಸರದ ಸುಮಾರು 100 ಎಕರೆ ಕೃಷಿ ಭೂಮಿ ಜಲಾವೃತವಾಗಿದೆ. ಪಂಜ– ಮಧ್ಯ ಸಂಪರ್ಕ ರಸ್ತೆಗೆ ಪಂಚಾಯಿತಿ ಮೂಲಕ ಬ್ಯಾರಿಕೇಡ್ ಅಳವಡಿಲಾಗಿದ್ದು, ಅಪಾಯದ ಸೂಚನೆ ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.